Sunday, December 3, 2023

Latest Posts

ದಸರಾದ ಯುವ ಸಂಭ್ರಮದಲ್ಲಿ ನಾರಿಶಕ್ತಿ ಅನಾವರಣ

ಹೊಸದಿಗಂತ ವರದಿ,ಮೈಸೂರು:

ಮಹಿಳೆ ಅಬಲೆಯಲ್ಲ. ಬದಲಾಗಿ ಆಕೆ ಸಬಲೆ. ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ಆದ ಕೊಡುಗೆಯನ್ನು ಮಹಿಳೆ ನೀಡುತ್ತಾ ಬಂದಿದ್ದಾಳೆ. ಹೀಗೆ ನಾರಿಶಕ್ತಿಯ ಬಗ್ಗೆ ಕಂಡು ಬಂದಿದ್ದು ನಾಡಹಬ್ಬ ದಸರಾದ ಅವಿಭಾಜ್ಯ ಅಂಗವಾದ ಯುವ ಸಂಭ್ರಮದ ವೇದಿಕೆಯಲ್ಲಿ.
ನಗರದ ಮಾನಸ ಗಂಗೋತ್ರಿಯ ಬಯಲು ರಂಗಮoದಿರದಲ್ಲಿ ನಡೆಯುತ್ತಿರುವ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ನಾರಿಶಕ್ತಿಯ ಅನಾವರಣವಾಯಿತು.

ಬನ್ನೂರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಸರಗೂರಿನ ಎಂ.ಎo.ಕೆ ಇಂಡಿಪೆoಡೆoಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಹುಣಸೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಾಜದಲ್ಲಿ ಮಹಿಳೆಯರು ನಿರಂತರವಾಗಿ ಹೆದರಿಸುತ್ತಿರುವ ಸಮಸ್ಯೆಗಳನ್ನು ಮೆಟ್ಟಿನಿಂತು ಹಂತ ಹಂತವಾಗಿ ಬೆಳೆದು ಬಂದ ಬಗ್ಗೆ ತಮ್ಮ ಅಮೋಘ ನೃತ್ಯ ಸಂಯೋಜನೆಯ ಮೂಲಕ ನೆರೆದಿದ್ದ ಯುವ ಸಮೂಹಕ್ಕೆ ತಿಳಿದರು.

ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ವಿದ್ಯಾರ್ಥಿಗಳ ತಂಡ ಕರ್ನಾಟಕ ವಿವಿಧ ಜಿಲ್ಲೆಗಳ ನೃತ್ಯವನ್ನು ಕೇಳಿಸದೆ ಕಲ್ಲು ಕಲ್ಲಿನಲಿ, ಜೋಗಿ ಚಿತ್ರದ ಏಳು ಮೇಲೆ ಮ್ಯಾಲೇರಿ ಕುಂತಾನವ್ವ ಹಾಗೂ ಆಕಸ್ಮಿಕ ಚಿತ್ರದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳಿಗೆ ಹಜ್ಜೆ ಹಾಕುತ್ತಿದ್ದಂತೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರೇಕ್ಷಕರೂ ಸಹ ಮೈರೆತು ಕುಣಿದರು.
ಕೊಳ್ಳೆಗಾಲದ ಜೆ.ಎಸ್.ಎಸ್. ಮಹಿಳಾ ಕಾಲೇಜಿನ ವಿದ್ಯಾರ್ಥಿಗಳ ತಂಡವು ಜನಪದ ಪರಂಪರೆ ಬಗ್ಗೆ ತಿಳಿಸುವ ಸಲುವಾಗಿ ಜೋಗಿ ಚಿತ್ರದ ಏಳು ಮೇಲೆ ಮ್ಯಾಲೇರಿ ಕುಂತಾನ್ವ ಮಾದೇವ, ಜನಪದ ಗೀತೆ ಸಿದ್ದಯ್ಯ ಸ್ವಾಮಿ ಬನ್ನಿ ಎಂಬ ಹಾಡಿಗೆ ಹೆಜ್ಜೆ ಹಾಕಿ ನೋಡುಗರನ್ನು ರಂಜಿಸಿದರು.

ಅರಕಲಗೂಡಿನ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟçಪೀತ ಮಹಾತ್ಮ ಗಾಂಧೀಜಿಯ ಜೀವನ ಚರಿತ್ರೆಯ ಜೊತೆಗೆ ಭಾರತದ ಸ್ವಾತಂತ್ರ÷್ಯ ಚಳುವಳಿಯಲ್ಲಿ ಗಾಂಧೀಜಿಯ ಶಾಂತಿಯ ಹೋರಟವನ್ನು ಅಮೋಘ ನೃತ್ಯ ಪ್ರದರ್ಶನದ ಮೂಲಕ ಸಭೀಕರ ಮುಂದೆ ಪ್ರದರ್ಶಿಸಿದರು.

ನಂಜನಗೂಡಿನ ಜೆ.ಎಸ್.ಎಸ್.ಕಾಲೇಜಿನ ವಿದ್ಯಾರ್ಥಿಗಳು ಆಂಜನೇಯನ ಶೌರ್ಯದ ಬಗ್ಗೆ ಭಜರಂಗಿ ಹಾಗೂ ಪ್ರೇಮ ಬರಹ ಚಿತ್ರದ ಗೀತೆಗಳಿಗೆ ನರ್ತಿಸುವ ಮುಖಾಂತರ ತಿಳಿಸಿದರೆ, ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದೆಶದ ಗಡಿ ಕಾಯುವ ಯೋಧರ ಬಗ್ಗೆ ಅಧ್ಬುತವಾಗಿ ನೃತ್ಯದ ಮೂಲಕ ಪ್ರಸ್ತುತ ಪಡಿಸಿದರು.

ಸರಗೂರಿನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬಹುತ್ವದ ಸಮಾಜಕ್ಕೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ತಮ್ಮ ನೃತ್ಯದ ಮೂಲಕ ತಿಳಿಸಿ ಎಲ್ಲರನ್ನು ಮನರಂಜಿಸಿದರು.

ಯುವ ಸಮೂಹವು ಇತ್ತೀಚೆಗೆ ಮಾಧಕ ವ್ಯಸನಕ್ಕೆ ಬಲಿಯಾಗಿ ದಾರಿ ತಪ್ಪುತ್ತಿರುವ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಗರದ ಲರ್ನರ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಯನ ಮನೋಹರವಾಗಿ ತಿಳಿಸುವುದರ ಜೊತೆಗೆ ನೆರೆದಿದ್ದ ಯುವ ಸಮೂಹವನ್ನು ರಂಜಿಸಿದರು.


ಅರಕಲಗೂಡಿನ ವರದರಾಜಲು ಕಾಂತಮ್ಮ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ರಾಮನ ಶೌರ್ಯ, ಸೀತೆಯ ಸಾತ್ವಿಕ ಗುಣ, ರಾವಣನ ಆರ್ಭಟ, ಆಂಜನೇಯನ ಸಾಹಸ ಸೇರಿದಂತೆ ರಾಮಾಯಣದ ಸಂಪೂರ್ಣ ಕಥೆಯನ್ನು ಯುವ ಸಂಭ್ರಮ ವೇದಿಕೆಯಲ್ಲಿ ತೋರಿಸುವ ಮೂಲಕ ಎಲ್ಲರನ್ನು ಮೂಕವಿಸ್ಮಿತಗೊಳಿಸಿದರು.

ಬಿಡದಿಯ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ವಿದ್ಯಾರ್ಥಿಗಳು ದೇಶಕ್ಕೆ ಆಧಾರವಾಗಿರುವಂತಹ ಯೋಧರು, ರೈತರು, ವೈದ್ಯರು ಹಾಗೂ ವಿಜ್ಞಾನಿಗಳ ಮಹತ್ವದ ಬಗ್ಗೆ ಅದ್ಭುತ ನೃತ್ಯ ಸಂಯೋಜನೆಯ ಮೂಲಕ ಪ್ರತಿಯೊಬ್ಬರಿಗೂ ತಿಳಿಸಿದರು.
ಇತ್ತೀಚೆಗೆ ಪರಿಸರದ ಮೇಲೆ ಮಾನವ ಹೇಗೆಲ್ಲ ಕ್ರೌರ್ಯವೆಸಗುವ ಮೂಲಕ ವನ್ಯಜೀವಿ ಹಾಗೂ ಮಾನವರ ಸಂಘರ್ಷಕ್ಕೆ ಕಾರಣನಾಗುತ್ತಿದ್ದಾನೆ ಎಂಬುದನ್ನು ಹೆಜ್ಜೆ ಹಾಕುವ ಮೂಲಕ ಯುವ ಸಮೂಹಕ್ಕೆ ಪರಿಸರದ ಮಹತ್ವವನ್ನು ಪಿರಿಯಾಪಟ್ಟಣದ ಬಿ.ಜಿ.ಎಸ್ ಪ್ರಥಮ ಕಾಲೇಜಿನ ವಿದ್ಯಾರ್ಥಿಗಳು ಸಾರಿದರು.

ಕನ್ನಡ ನಾಡನ್ನು ಆಳಿದ ರಾಜವಂಶವಾದ ಹೋಯ್ಸಳರ ಇತಿಹಾಸವನ್ನು ಮದ್ದೂರಿನ ಮಹಿಳಾ ಸರ್ಕಾರಿ ಕಾಲೇಜಿನ ತಂಡವು ಶರವೇಗದ ಸರದಾರ ಚಿತ್ರದ ಕನ್ನಡ ನಾಡಿನ ರನ್ನದ ರತುನ ಕೇಳೋ ಕಥೆಯಣ್ಣ ಹಾಡಿಗೆ ಹೆಜ್ಜೆ ಹಾಕಿ ಅದ್ಭುತವಾಗಿ ತಿಳಿಸಿದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!