ತಾಯಿ ಮಡಿಲು ಸೇರಿತು ಕಬ್ಬಿನಗದ್ದೆಯಲ್ಲಿ ಪತ್ತೆಯಾದ 10 ದಿನದ ಚಿರತೆ ಮರಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ನಾಸಿಕ್: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿಂಡೋರಿ ಪಟ್ಟಣದ ಕಬ್ಬಿನ ಗದ್ದೆಯಲ್ಲಿ ಪತ್ತೆಯಾದ 10 ದಿನದ ಚಿರತೆ ಮರಿಯನ್ನು ಯಶಸ್ವಿಯಾಗಿ ರಕ್ಷಿಸಿ ತಾಯಿಯೊಂದಿಗೆ ಸೇರಿಸಲಾಯಿತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಾವು 10 ದಿನದ ಚಿರತೆ ಮರಿಯನ್ನು ಅದರ ತಾಯಿಯೊಂದಿಗೆ ಸುರಕ್ಷಿತವಾಗಿ ಮತ್ತೆ ಸೇರಿಸಿದ್ದೇವೆ. ಕಬ್ಬಿನ ಗದ್ದೆಯಲ್ಲಿ ತಾಯಿಯಿಂದ ಬೇರ್ಪಟ್ಟ ಚಿರತೆ ಮರಿ ಪತ್ತೆಯಾಗಿದೆ. ಜಮೀನಿನಲ್ಲಿ ಕೆಲಸ ಮಾಡುವ ರೈತರು ನಮಗೆ ಈ ಬಗ್ಗೆ ಮಾಹಿತಿ ನೀಡಿದರು ಮತ್ತು ಅವರೇ ತಾಯಿ ಹಾಗೂ ಮರಿಯನ್ನು ಮತ್ತೆ ಒಂದುಗೂಡಿಸಲು ಪ್ರಯತ್ನಿಸಿದರು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಉಮೇಶ್ ವಾವೇರ್ ತಿಳಿಸಿದ್ದಾರೆ.

ಘಟನೆ ಕುರಿತು ಮಾಹಿತಿ ಪಡೆದ ದಿಂಡೋರಿ ಅರಣ್ಯ ಸಂರಕ್ಷಣಾಧಿಕಾರಿ, ತಾಯಿ ಚಿರತೆ ಮತ್ತು ಮರಿಯ ಪುನರ್ಮಿಲನವನ್ನು ಸೆರೆಹಿಡಿಯಲು ಇಕೋ-ಎಕೋ ಫೌಂಡೇಶನ್ ಸಹಾಯದಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಇದರಿಂದ ತಾಯಿ ಮರಿ ಒಂದಾದ ದೃಶ್ಯ ಸೆರೆಯಾಗಿದ್ದು, ಮುಂಜಾವ ತಾಯಿ ಚಿರತೆ ತನ್ನ ಮರಿಯನ್ನು ಹೊತ್ತೊಯ್ಯುತ್ತಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!