ತಮಿಳುನಾಡು ಅಧಿವೇಶನದಲ್ಲಿ ಮೊಳಗದ ರಾಷ್ಟ್ರಗೀತೆ: ಕಲಾಪದಿಂದಲೇ ಹೊರನಡೆದ ರಾಜ್ಯಪಾಲರು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ರಾಜ್ಯಪಾಲ ಆರ್​. ಎನ್​. ರವಿ ಹಾಗೂ ಡಿಎಂಕೆ ಸರ್ಕಾರದ ನಡುವಿನ ಹಗ್ಗ ಜಗ್ಗಾಟ ಮತ್ತೆ ಮುಂದುವರೆದಿದೆ.

ಇಂದು ತಮಿಳುನಾಡು ವಿಧಾನಸಭೆಯ ಚಳಿಗಾಲದ ಅಧಿವೇಶನ್ನು ಉದ್ದೇಶಿಸಿ ಮಾತನಾಡಬೇಕಿದ್ದ ರಾಜ್ಯಪಾಲ ಆರ್​. ಎನ್​. ರವಿ ಅವರು ಅಧಿವೇಶನದಲ್ಲಿ ರಾಷ್ಟ್ರಗೀತೆಗೆ ಅವಮಾನವಾಗಿದೆ ಎಂದು ತಮ್ಮ ಭಾಷಣ ಮಾಡದೆ ಅರ್ಧಕ್ಕೆ ವಾಪಸ್ಸ್ ಆಗಿದ್ದಾರೆ.

ರಾಜಭವನದ ಕಚೇರಿಯ ಪ್ರಕಟಣೆಯ ಪ್ರಕಾರ, ರಾಜ್ಯಪಾಲರು ವಿಧಾನಸಭೆಗೆ ಅಗಮಿಸಿದ ನಂತರ ಸಾಂಪ್ರದಾಯಿಕವಾಗಿ ರಾಷ್ಟ್ರಗೀತೆ ನಡಿಸಲಾಗುತ್ತದೆ. ಆದರೆ ಇಲ್ಲಿ ರಾಷ್ಟ್ರಗೀತೆಯ ಬದಲಿಗೆ ರಾಜ್ಯಗೀತೆ ‘ತಮಿಳು ತಾಯಿ ವಜ್ತು’ ಅನ್ನು ಮಾತ್ರವೇ ನುಡಿಸಲಾಗುತ್ತದೆ. ಇದಕ್ಕೆ ಪ್ರತಿಭಟಿಸಿ ಅವರು ವಿಧಾನಸಭೆಯಿಂದ ಹೊರ ನಡೆದರು ಎಂದು ಹೇಳಿದೆ.

ರಾಷ್ಟ್ರಗೀತೆಯನ್ನು ಹಾಡಲು ಮುಖ್ಯಮಂತ್ರಿಗಳು ಹಾಗೂ ವಿಧಾನಸಭೆಯ ಸ್ಪೀಕರ್​​ಗೂ ಸಹ ಸೂಚಿಸಿದರು. ಆದರೂ ನುಡಿಸಲಿಲ್ಲ ಎಂದು ರಾಜ್ಯಪಾಲರು ತೀವ್ರ ದುಃಖದಿಂದ ಸದನದಿಂದ ನಿರ್ಗಮಿಸಿದ್ದಾರೆ. ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಇಂತಹ ನಿರ್ಲಜ್ಜ ಅಗೌರವ ಸರಿಯಲ್ಲ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನೊಂದೆಡೆ ರಾಜ್ಯಪಾಲರ ನಡೆಯನ್ನು ಖಂಡಿಸಿರುವ ಮುಖ್ಯಮಂತ್ರಿ ಸ್ಟಾಲಿನ್​ ಅವರು, ರಾಜ್ಯಪಾಲರಾದ ರವಿ ಅವರು ಸಂವಿಧಾನವನ್ನು ಉಲ್ಲಂಘಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಅವರ ನಡೆ ಬಾಲಿಶತನ್ನದ್ದಾಗಿದೆ ಎಂದರು.

ಇನ್ನು ವಿಧಾನಸಭೆ ಸ್ಪೀಕರ್ ಅವರು ರಾಜ್ಯಪಾಲರ ಭಾಷಣದ ಭಾಷಾಂತರ ಆವೃತ್ತಿಯನ್ನು ಓದುವುದಲು ಪ್ರಾರಂಭಿಸಿದಾಗ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ಪ್ರತಿಭಟನೆ ನಡೆಸಿದವು. ಇನ್ನು ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ ಸೆಲ್ವಪೆರುಂತಗೈ ಅವರು, ರಾಜ್ಯಪಾಲರು ತಮಿಳುನಾಡು ಜನರ ವಿರುದ್ಧವಿದ್ದಾರೆ. ಅವರು ಪೊಲೀಸರ ವಿರುದ್ಧವಿದ್ದಾರೆ. ಆದ್ದರಿಂದ ಅವರು ವಿಧಾನಸಭೆಯ ಯಾವುದೇ ನಿರ್ಣಯವನ್ನು ಅಂಗೀಕರಿಸುವುದಿಲ್ಲ. ಇನ್ನು ಅಣ್ಣಾ ವಿಶ್ವವಿದ್ಯಾಲಯದ ಉಪಕುಲಪತಿಯನ್ನು ಸಹ ಅವರು ನೇಮಿಸಿಲ್ಲ ಎಂದರು.

ಇನ್ನು ರಾಜ್ಯಪಾಲರು ಸದನದಿಂದ ನಿರ್ಗಮಿಸಿದ ಕೆಲವೇ ಸಮಯದ ನಂತರ ಅಣ್ಣಾ ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ಅಖಿಲ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷದ ಶಾಸಕರು ಪ್ರತಿಭಟನೆಯನ್ನು ಆರಂಭಿಸಿದರು. ಆದ್ದರಿಂದ ಪ್ರತಿಭಟನಾ ನಿರತ ಶಾಸಕರನ್ನು ಸದನದಿಂದ ಹೊರಗೆ ಕರೆದುಕೊಂಡು ಹೋಗುವಂತೆ ಸ್ಪೀಕರ್ ಮಾರ್ಷಲ್‌ಗಳಿಗೆ ಸೂಚಿಸಿದರು. ಇದೆ ವೇಳೆ ಅಣ್ಣಾ ವಿಶ್ವವಿದ್ಯಾನಿಲಯ ವಿಚಾರವಾಗಿ ಬಿಜೆಪಿ ಮತ್ತು ಪಿಎಂಕೆ ಪಕ್ಷಗಳೆರಡು ಹೊರನಡೆದವು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!