ಮಗನಿಂದಲೇ ಹತ್ಯೆಯಾದ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾದ ನಟಿ ಕಾಸಮ್ಮಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರಾಷ್ಟ್ರಪ್ರಶಸ್ತಿ ಪಡೆದ ತಮಿಳಿನ ‘ಕಡೈಸಿ ವಿವಾಸಾಯಿ’ ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ ನಟಿ ಕಾಸಮ್ಮಳ್​ (71) ಮಗನ ದೌರ್ಜನ್ಯಕ್ಕೆ ಬಲಿಯಾಗಿದ್ದಾರೆ.

ಕರಣ ಸಂಬಂಧ ಪುತ್ರ ಪಿ.ನಾಮಕೋಡಿ(52)ಯನ್ನು ತಮಿಳುನಾಡು (Tamilnadu) ಪೊಲೀಸರು ಬಂಧಿಸಿದ್ದಾರೆ. ಮಧುರೈ (Madhurai) ಜಿಲ್ಲೆಯ ಉಸಿಲಂಪಟ್ಟಿ ಸಮೀಪದ ಅನೈಯೂರಿನಲ್ಲಿ ಈ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಮದ್ಯ ಖರೀದಿ ಮಾಡಲು ಹಣ ಕೊಡದಿದ್ದಕ್ಕೆ ತಾಯಿ ಕಾಸಮ್ಮಳ್​ ಜತೆ ಜಗಳಕ್ಕಿಳಿದ ನಾಮಕ್ಕೋಡಿ, ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾನೆ. ಇದರ ಪರಿಣಾಮ ಕಾಸಮ್ಮಳ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾಸಮ್ಮಳ್​ ಮತ್ತು ಆಕೆಯ ಪತಿ ಬಾಲಸಾಮಿಗೆ ನಾಲ್ವರು ಮಕ್ಕಳಿದ್ದಾರೆ. ನಾಮಕೋಡಿಗೆ ಮದುವೆಯಾಗಿದ್ದು, ಪತ್ನಿಯಿಂದ ದೂರವಾಗಿ ತಾಯಿಯ ಜತೆಯಲ್ಲೇ ವಾಸವಿದ್ದನು.

ಕಾಸಮ್ಮಳ್​ ಅವರು ವಿಜಯ್ ಸೇತುಪತಿ ಮತ್ತು ನಲ್ಲಂದಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ‘ಕಡೈಸಿ ವಿವಸಾಯಿ’ ಚಿತ್ರದಲ್ಲಿ ತಮ್ಮ ಪಾತ್ರದಿಂದಲೇ ಹೆಸರುವಾಸಿಯಾಗಿದ್ದರು. ಸಿನಿಮಾದಲ್ಲಿ ಹಲವಾರು ಗ್ರಾಮಸ್ಥರು ನಟಿಸಿದ್ದರು. ‘ಕಡೈಸಿ ವಿವಸಾಯಿ’ ಅತ್ಯುತ್ತಮ ತಮಿಳು ಚಿತ್ರ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಗಳಿಸಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!