ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮೊದಲ ಶಿಕ್ಷಣ ಸಚಿವ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ಸವಿನೆನಪಿಗಾಗಿ ಪ್ರತಿ ವರ್ಷ ನವೆಂಬರ್ 11 ರಂದು ರಾಷ್ಟ್ರೀಯ ಶಿಕ್ಷಣ ದಿನ ಅಥವಾ ರಾಷ್ಟ್ರೀಯ ಶಿಕ್ಷಾ ದಿವಸ್ ಎಂದು ಆಚರಿಸಲಾಗುತ್ತದೆ. ಅಬುಲ್ ಕಲಾಂ ಆಜಾದ್ ಯಾರು ? ರಾಷ್ಟ್ರೀಯ ಶಿಕ್ಷಣ ದಿನದ ಇತಿಹಾಸ, ಮಹತ್ವ ಮತ್ತು ಥೀಮ್ ಎನ್ನುವ ಕುರಿತು ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.
ರಾಷ್ಟ್ರೀಯ ಶಿಕ್ಷಣ ದಿನ :
ಮೌಲಾನಾ ಅಬ್ದುಲ್ ಆಜಾದ್ ಯಾರು?: ಮೌಲಾನಾ ಅಬ್ದುಲ್ ಆಜಾದ್ ಅವರು ನವೆಂಬರ್ 11, 1888 ರಂದು ಜನಿಸಿದರು ಮತ್ತು ಫೆಬ್ರವರಿ 22, 1958 ರಂದು ಕೊನೆಯುಸಿರೆಳೆದರು. ಅವರ ಮೂಲ ಹೆಸರು ಮೌಲಾನಾ ಸಯ್ಯಿದ್ ಅಬುಲ್ ಕಲಾಂ ಗುಲಾಮ್ ಮುಹಿಯುದ್ದೀನ್ ಅಹ್ಮದ್ ಬಿನ್ ಖೈರುದ್ದೀನ್ ಅಲ್-ಹುಸೇನಿ ಆಜಾದ್. ಅವರು ಸುಧಾರಕರಾಗಿದ್ದರು ಮತ್ತು ಶಿಕ್ಷಣದ ಮೂಲಕ ರಾಷ್ಟ್ರ-ನಿರ್ಮಾಣಕ್ಕಾಗಿ ಅವರ ಕೊಡುಗೆಗಳಿಂದ ಹೆಸರುವಾಸಿಯಾಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ, ವಿದ್ವಾಂಸ ಮತ್ತು ಪ್ರಖ್ಯಾತ ಶಿಕ್ಷಣತಜ್ಞ, ಮೌಲಾನಾ ಆಜಾದ್ ಸ್ವತಂತ್ರ ಭಾರತದ ಪ್ರಮುಖ ವಾಸ್ತುಶಿಲ್ಪಿಯಾಗಿದ್ದು, ಅವರು AICTE ಮತ್ತು UGC ಯಂತಹ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಜವಾಬ್ದಾರಿಯನ್ನು ಹೊಂದಿದ್ದರು. ಮೊದಲ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಐಐಟಿ ಖರಗ್‌ಪುರ, ಮೌಲಾನಾ ಅಬುಲ್ ಕಲಾಂ ಆಜಾದ್ ಸ್ಥಾಪಿಸಿದರು. ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಶಿಕ್ಷಣ, ರಾಷ್ಟ್ರ ನಿರ್ಮಾಣ ಮತ್ತು ಸಂಸ್ಥೆ-ನಿರ್ಮಾಣ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳು ಅಪಾರ. ಅವರು ಭಾರತದಲ್ಲಿ ಶಿಕ್ಷಣದ ಪ್ರಮುಖ ವಾಸ್ತುಶಿಲ್ಪಿ. ಭಾರತದ ಮೊದಲ ಉಪರಾಷ್ಟ್ರಪತಿಯಾಗಿದ್ದರು ಮತ್ತು 1947 ರಿಂದ 1958 ರವರೆಗೆ ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದರು.
ರಾಷ್ಟ್ರೀಯ ಶಿಕ್ಷಣ ದಿನದ ಇತಿಹಾಸ:
ಸೆಪ್ಟೆಂಬರ್ 11,2008 ರಂದು, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (HRD) ನವೆಂಬರ್ 11 ಅನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚಸುವುದಾಗಿ ಘೋಷಿಸಿತು. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಕೊಡುಗೆಯನ್ನು ಸ್ಮರಿಸುವ ಮತ್ತು ಮಹಾನ್ ವ್ಯಕ್ತಿಯ ಜನ್ಮದಿನವನ್ನು ಆಚರಿಸಲಾಗುತ್ತದೆ. 2008 ರಿಂದ ಭಾರತದಲ್ಲಿ ಪ್ರತಿ ವರ್ಷ ರಾಷ್ಟ್ರೀಯ ಶಿಕ್ಷಣ ದಿನವನ್ನು ರಜಾದಿನವೆಂದು ಘೋಷಿಸದೆ ಆಚರಿಸಲಾಗುತ್ತದೆ.
ರಾಷ್ಟ್ರೀಯ ಶಿಕ್ಷಣ ದಿನದ ಮಹತ್ವ ಮತ್ತು ಆಚರಣೆ:
ನವೆಂಬರ್ 11ರಂದು ರಾಷ್ಟೀಯ ಶಿಕ್ಷಣ ದಿನದ ಪ್ರಯುಕ್ತ ಶಾಲಾ ಕಾಲೇಜುಗಳಲ್ಲಿ ವಿವಿಧ ಆಸಕ್ತಿದಾಯಕ ಸೆಮಿನಾರ್‌ಗಳು, ವಿಚಾರ ಸಂಕಿರಣಗಳು, ಪ್ರಬಂಧ-ಬರಹ, ರ್ಯಾಲಿಗಳು ಇತ್ಯಾದಿಗಳನ್ನು ನಡೆಸುವ ಮೂಲಕ ಪ್ರತಿ ವರ್ಷ ಶಾಲೆಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಟ್ಟಿಗೆ ಸೇರಿ ಸಾಕ್ಷರತೆಯ ಮಹತ್ವ ಮತ್ತು ಶಿಕ್ಷಣದ ಎಲ್ಲಾ ಅಂಶಗಳಿಗೆ ರಾಷ್ಟ್ರದ ಬದ್ಧತೆಯ ಬಗ್ಗೆ ಮಾತನಾಡುತ್ತಾರೆ. ರಾಷ್ಟ್ರೀಯ ಶಿಕ್ಷಣ ದಿನವು ಸ್ವತಂತ್ರ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲಾನಾ ಅಬ್ದುಲ್ ಆಜಾದ್ ಅವರು ನೀಡಿದ ಎಲ್ಲಾ ಮಹಾನ್ ಕೊಡುಗೆಗಳಿಗೆ ಗೌರವವಾಗಿದೆ.