ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ನಟರೊಬ್ಬರು ರಾಷ್ಟ್ರಪ್ರಶಸ್ತಿ ಪಡೆದು ದಶಕಗಳೇ ಕಳೆದಿವೆ. ಆದರೆ ಈಗ ಅದಕ್ಕೆ ಬ್ರೇಕ್ ಬಿದ್ದಿದ್ದು, ನಟ ರಿಷಬ್ ಶೆಟ್ಟಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಾಂತಾರ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಈ ವರ್ಷ, ರಿಷಬ್ ಶೆಟ್ಟಿ ಮಲಯಾಳಂ ನಟ ಮಮ್ಮುಟಿ, ಹಿಂದಿಯ ವಿಕ್ರಾಂತ್ ಮೆಸ್ಸಿ ಮತ್ತು ಇತರ ಅನೇಕ ನಟರಿಂದ ಸ್ಪರ್ಧೆಯನ್ನು ಎದುರಿಸಿದರು. ಆದರೆ ರಿಷಬ್ ಶೆಟ್ಟಿ ರಾಷ್ಟ್ರಪ್ರಶಸ್ತಿ ಗೆದ್ದಿದ್ದಾರೆ. ಇದು ಕರ್ನಾಟಕದ ನಟನಿಗೆ ಕನ್ನಡದ ಮೊದಲ ರಾಷ್ಟ್ರೀಯ ಪ್ರಶಸ್ತಿ ಎಂದು ಹೇಳಲಾಗುತ್ತದೆ.