‘ನ್ಯಾಷನಲ್ ಹೆರಾಲ್ಡ್’ ಗೆ ಬೀಗ: ಕಾಂಗ್ರೆಸ್ ಪ್ರಧಾನ ಕಚೇರಿ ಸುತ್ತ ಬಿಗಿ ಭದ್ರತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯಾಷನಲ್ ಹೆರಾಲ್ಡ್ ಕಚೇರಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಸೀಲ್ ಮಾಡಿದೆ.ಇದರ ಬೆನ್ನಲ್ಲೇ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯ ಹೊರಗೆ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.

ಸೋನಿಯಾ-ರಾಹುಲ್ ಗಾಂಧಿ ಅವರ ಕಂಪನಿ ಯಂಗ್ ಇಂಡಿಯಾ ಒಡೆತನದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ದೆಹಲಿ ಮತ್ತು ಕೋಲ್ಕತ್ತಾ ಸೇರಿದಂತೆ ದೇಶದಾದ್ಯಂತ 12 ಸ್ಥಳಗಳಲ್ಲಿ ಇಡಿ ಮಂಗಳವಾರ ದಾಳಿ ನಡೆಸಿತ್ತು.

ದೆಹಲಿಯ ಬಹದ್ದೂರ್ ಷಾ ಜಾಫರ್ ಮಾರ್ಗ್‌ನಲ್ಲಿರುವ ಹೆರಾಲ್ಡ್ ಹೌಸ್‌ನಲ್ಲಿಯೂ ಅವರು ಶೋಧ ನಡೆಸಿದ್ದರು. ನ್ಯಾಷನಲ್ ಹೆರಾಲ್ಡ್ ನ ಪ್ರಕಾಶನ ಕಚೇರಿಯೂ ಇಲ್ಲೇ ಇದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆರಾಲ್ಡ್ ಹೌಸ್ ಗೆ ಆಗಮಿಸಿ ಈ ಹಿಂದೆ ಪ್ರತಿಭಟನೆ ನಡೆಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!