ಹೊಸದಿಗಂತ ವರದಿ, ಅಂಕೋಲಾ:
ಲಾರಿ ಪಲ್ಟಿಯಾಗಿ ಲಾರಿಯೊಳಗೆ ಸಿಲುಕಿದ್ದ ಚಾಲಕ ಸ್ಥಳದಲ್ಲೇ ಮೃತ ಪಟ್ಟ ಘಟನೆ ತಾಲೂಕಿನ ಅಗಸೂರು ಸರಳೇಬೈಲ್ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಂಭವಿಸಿದೆ.
ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಬರುತ್ತಿದ್ದ ಎಂ.ಎಚ್ 14 ಎಚ್. ಜಿ 0670 ನೋಂದಣಿ ಸಂಖ್ಯೆ ಹೊಂದಿರುವ ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯಿಂದ ರಾಷ್ಟ್ರೀಯ ಹೆದ್ದಾರಿ ಬದಿಯ ತಗ್ಗಿನಲ್ಲಿ ಪಲ್ಟಿಯಾಗಿದ್ದು ಲಾರಿಯೊಳಗೆ ಸಿಲುಕಿದ್ದ ಚಾಲಕನ ಎಡಕಾಲು ತುಂಡಾಗಿ, ಎಡ ಕೈ ಮುರಿದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಚಾಲಕನ ಹೆಸರು, ವಿಳಾಸ ತಿಳಿಯಬೇಕಿದ್ದು ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪಿ.ಎಸ್. ಐ ಸುನೀಲ ಹುಲ್ಲೋಳ್ಳಿ ಪ್ರಕರಣ ದಾಖಲಿಸಿದ್ದಾರೆ.