ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಸಮೀಪದ ಸಸಿಹಿತ್ಲು ಮುಂಡಾ ಬೀಚ್‌ನಲ್ಲಿ ಮೂರು ದಿನಗಳ ಕಾಲ 5 ನೇ ರಾಷ್ಟ್ರೀಯ ಸರ್ಫಿಗ್ ಸ್ಪರ್ಧೆ ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಚಾಲನೆ ನೀಡಿದರು.
ಈ ರಾಷ್ಟ್ರೀಯ ಸ್ಪರ್ಧೆಯ ಸಂದರ್ಭ ಮಾನ್ಸೂನ್ ಮಳೆಯ ಪೂರ್ವಭಾವಿ ಬಿರುಗಾಳಿಯ ಆರಂಭವಾಗಿರುವುದು ಸಂಘಟಕರ ಉತ್ಸಾಹ ಇಮ್ಮುಡಿಗೊಳಿಸಿದೆ.
ರಾಷ್ಟ್ರೀಯ ಸರ್ಫಿಂಗ್ ಪಟುಗಳಾದ ಶ್ರೀಕಾಂತ್ ಡಿ, ಸೂರ್ಯ ಪಿ, ಆಜೀಶ್ ಆಲಿ, ಶಿವರಾಜ್ ಬಾಬು, ಕಮಲೀ ಮೂರ್ತಿ ಭಾಗವಹಿಸುವಿಕೆ ಸ್ಪರ್ಧೆಯನ್ನು ಉನ್ನತ ಮಟ್ಟಕ್ಕೇರಿಸಲಿದೆ.
ಸ್ಪರ್ಧೆಯು ಪುರುಷರ ಮತ್ತು ಮಹಿಳೆಯರ ಮುಕ್ತ ವಿಭಾಗಗಳು ಮತ್ತು ಬಾಲಕ ಬಾಲಕಿಯರ ವಿಭಾಗವನ್ನು ಒಳಗೊಂಡಿದೆ.
ರಾಷ್ತ್ರೀಯ ಮಟ್ಟದ ಸರ್ಫಿಂಗ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಮೊದಲ ದಿನದ ಸ್ಪರ್ಧೆಯಲ್ಲಿ ತಮಿಳುನಾಡಿನ ಸ್ಪರ್ಧಾಳುಗಳು ಮೇಲುಗ್ಯೆ ಸಾಧಿಸಿದ್ದಾರೆ. ಪುರುಷರ ವಿಭಾಗದಲ್ಲಿ ಒಟ್ಟು 14 ಮಂದಿ ಕ್ವಾರ್ಟರ್ ಫ್ಯೆನಲ್ ತಲುಪಿದ್ದು ತಮಿಳುನಾಡಿನ ಶಿವರಾಜ್ ಬಾಬು (15.55),ಅಜೀಶ್ ಆಳಿ (15.33)ಶ್ರೀಕಾಂತ್ ಡಿ (13.50) ಹಾಗೂ ಹರೀಶ್ ಎ,ತಾಯಿನ್ ಅರುಣ್,ಮಣಿವಣ್ಣನ್ ಟಿ ,ಸಂಜಯ್ ಸೆಲ್ವಮಣಿ ,ಸೂರ್ಯ ಪಿ,ಸಂಜಯ್ ಕುಮಾರ್ ಎಸ್,ಮಣಿಕಂದನ್ ಎಂ,ರುಬಿನ್ ವಿ,ಸುಬ್ರಮಣ್ಯ ಎ,ಅಖಿಲನ್ ಎಸ್ ಮತ್ತು ಮಣಿಕಂದನ್ ಎಲ್ ಸೇರಿದಂತೆ 14 ಮಂದಿ ಕ್ವಾರ್ಟರ್ ಫ್ಯೆನಲ್ ತಲುಪಿದ್ದಾರೆ.
ಮುಲ್ಕಿ ಸರ್ಫಿಂಗ್ ಸ್ವಾಮಿ ಫೌಂಡೇಶನ್‌ನ ಮಂತ್ರ ಸರ್ಫ್ ಕ್ಲಬ್ ಆಶ್ರಯದಲ್ಲಿ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಸ್ಪರ್ಧೆಗಳನ್ನು ನಡೆಸಲಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆ, ನವ ಮಂಗಳೂರು ಬಂದರು ಪ್ರಾಧಿಕಾರ, ದ..ಕ. ಜಿಲ್ಲಾಡಳಿತ ಸಹಕಾರ ನೀಡಲಿದೆ.