ರಾಷ್ಟ್ರೀಯ ಕಡಲ ದಿನ : ಕಡಲ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸೋಣ ಸಿಎಂ ಟ್ವೀಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ರಾಷ್ಟ್ರೀಯ ಕಡಲ ದಿನದ ಪ್ರಯುಕ್ತ ಕಡಲ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸೋಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್‌ ಮಾಡಿದ್ದಾರೆ.

ಭಾರತದಲ್ಲಿ ಜಾಗತಿಕವಾಗಿ ಆರ್ಥಿಕತೆಯನ್ನು ಬೆಂಬಲಿಸುವ ಕಡಲ ಮಾರ್ಗದ ಕುರಿತು ಎಲ್ಲೆಡೆ ಜಾಗೃತಿ ಮೂಡಿಸಲು ಪ್ರತಿ ವರ್ಷ ರಾಷ್ಟ್ರೀಯ ಕಡಲ ದಿನವನ್ನು ಏಪ್ರಿಲ್ 5 ರಂದು ಆಚರಿಸಲಾಗುತ್ತದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವಿಟ್ಟರ್‌ ಖಾತೆಯಲ್ಲಿ, “ಭಾರತೀಯ ಹಡಗು 1919ರ ಎಪ್ರಿಲ್‌ 5ರಂದು ತನ್ನ ಮೊದಲ ಸಮುದ್ರಯಾನವನ್ನು ಪ್ರಾರಂಭಿಸಿತು. ಈ ದಿನದ ನೆನಪಿಗೆ ಪ್ರತೀ ವರ್ಷ ಎಪ್ರಿಲ್‌ 5ರಂದು ರಾಷ್ಟ್ರೀಯ ಕಡಲ ದಿನವನ್ನು ಆಚರಿಸಲಾಗುತ್ತದೆ. ಜಗತ್ತಿನ ವಿವಿಧ ದೇಶಗಳ ಮಾರುಕಟ್ಟೆಗೆ ಸರಕುಗಳನ್ನು ರಫ್ತು ಮಾಡುವುದು. ಬೇರೆ ದೇಶದಿಂದ ಅಗತ್ಯವಿರುವ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದು ಸೇರಿದಂತೆ ಮೊದಲಾದ ವಾಣಿಜ್ಯ ಚಟುವಟಿಕೆಗಳಿಗೆ ಕಡಲು ಆಧಾರ. ಕಡಲ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸೋಣ.” ಎಂದು ಟ್ವೀಟ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!