CINEMA| ಬಾಲಿವುಡ್ ಸ್ಟಾರ್‌ಗಳನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿ ನಿಂತ ರಾಮ್ ಚರಣ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆರ್‌ಆರ್‌ಆರ್ ನಂತರ ರಾಮ್ ಚರಣ್ , ಎನ್‌ಟಿಆರ್ ಮತ್ತು ರಾಜಮೌಳಿ ದೇಶ ಮತ್ತು ವಿದೇಶಗಳಲ್ಲಿ ಹೆಸರುವಾಸಿಯಾಗಿದ್ದಾರೆ. ಬಾಲಿವುಡ್ ತಾರೆಯರಿಗಿಂತ ಚರಣ್ ಮತ್ತು ಎನ್ ಟಿಆರ್ ಹೆಚ್ಚು ಮನ್ನಣೆ ಪಡೆಯುತ್ತಿದ್ದಾರೆ.

ಜನಪ್ರಿಯ ಚಲನಚಿತ್ರ ವೆಬ್‌ಸೈಟ್ IMDB ಪ್ರತಿ ವಾರ ಮತ್ತು ಪ್ರತಿ ತಿಂಗಳು ಭಾರತದ ಟಾಪ್ ಸ್ಟಾರ್‌ಗಳ ಪಟ್ಟಿಯನ್ನು ನೀಡುತ್ತದೆ. IMDB ಅಭಿಮಾನಿಗಳ ಮತದಾನ, ಅವರ ಜನಪ್ರಿಯತೆ ಮತ್ತು ಅವರ ಚಟುವಟಿಕೆಗಳ ಆಧಾರದ ಮೇಲೆ ಈ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಕಳೆದ ಕೆಲವು ವರ್ಷಗಳಿಂದ ಚರಣ್ ಮತ್ತು ಎನ್ಟಿಆರ್ ಈ ಟಾಪ್ 10 ಪಟ್ಟಿಯಲ್ಲಿದ್ದಾರೆ. ಈ ವಾರ ಬಿಡುಗಡೆಯಾದ ಇತ್ತೀಚಿನ ಪಟ್ಟಿಯಲ್ಲಿ ರಾಮ್ ಚರಣ್ ಬಾಲಿವುಡ್ ತಾರೆಯರಾದ ಶಾರುಖ್ ಮತ್ತು ಸಲ್ಮಾನ್ ಅವರನ್ನು ಹಿಂದಿಕ್ಕಿದ್ದಾರೆ.

ಈ ಪಟ್ಟಿಯಲ್ಲಿ ರಾಮ್ ಚರಣ್ ಮೊದಲ ಸ್ಥಾನದಲ್ಲಿದ್ದು, ಬಾಲಿವುಡ್ ನಟಿ ಯಾಮಿ ಗೌತಮ್ ಎರಡನೇ ಸ್ಥಾನದಲ್ಲಿದ್ದಾರೆ. ಶಾರುಖ್ ಮೂರನೇ, ದೀಪಿಕಾ ಪಡುಕೋಣೆ ನಾಲ್ಕನೇ, ಸಲ್ಮಾನ್ ಐದನೇ, ಎನ್ ಟಿಆರ್ ಆರನೇ, ಐಶ್ವರ್ಯ ರೈ ಏಳನೇ, ರಾಶಿ ಖನ್ನಾ ಎಂಟನೇ, ಅಮೀರ್ ಖಾನ್ ಒಂಬತ್ತನೇ ಮತ್ತು ಸನ್ನಿ ಕೌಶಲ್ ಹತ್ತನೇ ಸ್ಥಾನದಲ್ಲಿದ್ದಾರೆ. ರಾಮ್ ಚರಣ್ ಮೊದಲ ಸ್ಥಾನದಲ್ಲಿ ನಿಂತಿರುವುದರಿಂದ ಚರಣ್ ಅಭಿಮಾನಿಗಳು ಖುಷಿಯಾಗಿದ್ದಾರೆ.

ಇತ್ತೀಚಿನ ಸಲ್ಮಾನ್ ಖಾನ್ ಕಿಸೀಕಾ ಭಾಯಿ ಕಿಸೀಕಾ ಜಾನ್ ಚಿತ್ರದ ಹಾಡಿಗೆ ಚರಣ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಚರಣ್ ಸಲ್ಮಾನ್ ಖಾನ್ ಮತ್ತು ವೆಂಕಟೇಶ್ ಜೊತೆ ಮಾಸ್ ಸ್ಟೆಪ್ಸ್ ಹಾಕಿ ಲುಂಗಿ ಡ್ಯಾನ್ಸ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!