ಹೊಸದಿಗಂತ ವರದಿ ಧಾರವಾಡ:
ಕರ್ನಾಟಕ ವಿಶ್ವವಿದ್ಯಾಲಯದ ಗೋಲ್ಡನ್ ಜುಬ್ಲಿ ಸಭಾಂಗಣದಲ್ಲಿ 26ನೇ ಯುವಜನೋತ್ಸವದ ಜನಪದ ಗೀತೆ ಸ್ಪರ್ಧೆಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ದೇಶದ ವಿವಿಧ ಭಾಗಗಳಿಂದ ಬಂದಿರುವ ಕಲಾವಿದರು ಪರಸ್ಪರ ಸಂಸ್ಕೃತಿ ವಿನಿಮಯ ಮಾಡಿಕೊಳ್ಳಬೇಕು. ಕಲಾ ಪ್ರತಿಭೆಯಿಂದ ಹೆತ್ತವರಿಗೆ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರಬೇಕು. ದೇಶದ ಜಲ್ವಂತ ಸಮಸ್ಯೆಗಳನ್ನು ಅಧ್ಯಯಿಸಿ ಪರಿಹಾರ ಹುಡುಕಬೇಕು ಎಂದರು.
ಸ್ಪರ್ಧೆಯ ಮೊದಲನೇ ದಿನ ಉತ್ತರಾಖಂಡ, ಛತ್ತಿಸಘರ, ಆಂಧ್ರಪ್ರದೇಶ, ಲಡಾಕ್, ತೆಲಂಗಾಣ, ಹರಿಯಾಣ, ಬಿಹಾರ, ದಿಯು-ದಮನ್, ಅರುಣಾಚಲ ಪ್ರದೇಶ, ಪಂಜಾಬ್, ತಮಿಳುನಾಡು ತಂಡಗಳು ತಮ್ಮ ಪ್ರಾಂತೀಯ ಸೊಗಡಿನ ಜನಪದ ಗೀತೆ ಪ್ರಸ್ತುತಪಡಿಸಿದವು.
ಧಾರವಾಡದ ಎಸ್.ಎಸ್. ಹಿರೇಮಠ, ಅಲಹಾಬಾದ್ ನ ಡಾ.ರಂಜನಾ ತ್ರಿಪಾಠಿ, ಬಿಹಾರನ ರಂಜನ ಸರ್ಕಾರ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು.