April 10, 2026
Friday, April 10, 2026
spot_img

ಅಮೆರಿಕವಿಲ್ಲದ NATO ‘ಪೇಪರ್‌ ಹುಲಿ’ | ಇರಾನ್ ಯುದ್ಧಕ್ಕೆ ವಿರಾಮ ಇಲ್ಲವೇ ಇಲ್ಲ: ಟ್ರಂಪ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ವಿರುದ್ಧದ ಸಂಘರ್ಷಕ್ಕೆ ವಿರಾಮ ಕೊಡಲು ತಾವು ಸಿದ್ಧರಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆ ಅಂತಿಮ ಹಂತಕ್ಕೆ ತಲುಪುತ್ತಿದೆ ಎಂದು ಅವರು ಹೇಳಿದ್ದಾರೆ.

ಇರಾನ್ ವಿರುದ್ಧದ ಯುದ್ಧದಲ್ಲಿ ಸಮರ್ಪಕ ಬೆಂಬಲ ನೀಡದ ಹಿನ್ನೆಲೆಯಲ್ಲಿ ನಾಟೋ ಮಿತ್ರ ರಾಷ್ಟ್ರಗಳ ಮೇಲೆ ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮೆರಿಕವಿಲ್ಲದೆ ಈ ಮೈತ್ರಿಕೂಟ “ಪೇಪರ್ ಹುಲಿ”ಯಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ:

ಇನ್ನೊಂದೆಡೆ, ಇರಾನ್ ತನ್ನ ಮೇಲೆ ನಡೆದ ದಾಳಿಗೆ ಕಠಿಣ ಪ್ರತಿಕ್ರಿಯೆ ನೀಡಿದ್ದು, ಶತ್ರುಗಳಿಗೆ ತೀವ್ರ ಹೊಡೆತ ನೀಡಿದ್ದೇವೆ ಎಂದು ಹೇಳಿದೆ. ನಮ್ಮ ದೇಶದ ಮೇಲೆ ಇಸ್ರೇಲ್‌-ಅಮೆರಿಕ ದಾಳಿ ತಪ್ಪು ಲೆಕ್ಕಾಚಾರವಾಗಿ ಎಂದು ನಾಯಕ ಮೊಜ್ತಬಾ ಖಮೇನಿ ಹೇಳಿಕೆ ನೀಡಿದ್ದಾರೆ.

ಒಟ್ಟಾರೆ, ಇರಾನ್-ಅಮೆರಿಕ ನಡುವಿನ ಉದ್ವಿಗ್ನತೆ ಕಡಿಮೆಯಾಗುವ ಲಕ್ಷಣಗಳು ಕಾಣಿಸದೇ, ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !