ಧೂಳು ಮತ್ತು ಹೊಗೆ ನಮ್ಮ ಆರೋಗ್ಯ ಮತ್ತು ನಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ಎಷ್ಟೇ ಮೇಕಪ್ ಮಾಡಿದರೂ ಚರ್ಮದ ಸೋಂಕುಗಳು ಸಂಭವಿಸುತ್ತವೆ.
ಪ್ರತಿದಿನ ಮೂರ್ನಾಲ್ಕು ಬಾರಿ ಸೋಪ್ ನಲ್ಲಿ ಮುಖ ತೊಳೆದ್ರೂ ಧೂಳು, ಜಿಡ್ಡು ಹೋಗಿಲ್ಲ ಎನ್ನುವವರು ಮನೆಯಲ್ಲಿಯೇ ಸಿಗುವ ಪದಾರ್ಥ ಬಳಸಿ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.
ಜೇನುತುಪ್ಪ, ನಿಂಬೆ ರಸ ಮತ್ತು ಹಾಲಿನ ಕೆನೆ ಪೇಸ್ಟ್ ಮಾಡಿ. ನಂತರ ನಿಮ್ಮ ಮುಖಕ್ಕೆ ಹಚ್ಚಿ, ಮಸಾಜ್ ಮಾಡಿ ಮತ್ತು 10 ನಿಮಿಷಗಳ ನಂತರ ತೊಳೆಯಿರಿ.
ಸ್ವಲ್ಪ ಅರಿಶಿನ, ಶ್ರೀಗಂಧದ ಪುಡಿ ಮತ್ತು ಹಾಲನ್ನು ಬೆರೆಸಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. 2-3 ನಿಮಿಷಗಳ ಕಾಲ ಮಸಾಜ್ ಮಾಡಿ ಮತ್ತು ಸ್ವಲ್ಪ ಸಮಯದ ನಂತರ ತೊಳೆಯಿರಿ.
ಬಾಳೆಹಣ್ಣು ಮತ್ತು ಹಾಲು ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ, 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ಒಂದು ಚಮಚ ಗುಲಾಬಿ ರಸ ಮತ್ತು ಒಂದು ಚಮಚ ನೀರನ್ನು ಬೆರೆಸಿ ಸಂಜೆ ಮಲಗುವ ಮುನ್ನ ಮುಖಕ್ಕೆ ಹಚ್ಚಿಕೊಳ್ಳಿ. ಬೆಳಗ್ಗೆ ಎದ್ದ ತಕ್ಷಣ ಮುಖ ತೊಳೆಯಿರಿ.