ನವರಾತ್ರಿ ಹಬ್ಬ ಬಂತೆಂದರೆ ಸಾಕು ಒಂಬತ್ತು ದಿನಗಳಿಗೆ ಒಂಬತ್ತು ಬಣ್ಣದ ಬಟ್ಟೆಗಳನ್ನು ಜೋಡಿಸಿ ಇಟ್ಟುಬಿಡಲಾಗುತ್ತದೆ. ಒಂಬತ್ತು ದಿನಗಳಲ್ಲಿ ಒಂಬತ್ತು ಬಣ್ಣದ ಬಟ್ಟೆಗಳನ್ನು ಧರಿಸುವುದು ಶ್ರೇಷ್ಠವಾಗಿದೆ. ನವರಾತ್ರಿ ಹಬ್ಬದ ಪ್ರತಿಯೊಂದು ದಿನವೂ ಆಯಾ ಬಣ್ಣದ ಬಟ್ಟೆಯನ್ನು ಧರಿಸಿ ದೇವರ ಕೋಣೆಯನ್ನು ಅಲಂಕರಿಸಿ ಪೂಜೆಯನ್ನು ಮಾಡುತ್ತಾರೆ. ಹೀಗೆ ಬಣ್ಣದ ಬಟ್ಟೆಯನ್ನು ಧರಿಸಿ ಹಬ್ಬವನ್ನು ಆಚರಿಸುವುದು ಒಂದುಗೂಡುವಿಕೆಯನ್ನು ಹಾಗೂ ಭಕ್ತಿಯನ್ನು ಪ್ರತಿನಿಧಿಸುತ್ತದೆ.
ಅಕ್ಟೋಬರ್ 11 ರಿಂದ 19 ರವರೆಗೆ ಆಚರಿಸಲಾಗುತ್ತಿದ್ದು, ಈ 9 ದಿನಗಳು ವಿವಿಧ ಬಣ್ಣಗಳ ಬಟ್ಟೆಯನ್ನು ಧರಿಸುವುದರಲ್ಲಿ ಜನರು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ನವರಾತ್ರಿ ಹಬ್ಬದ ಸಮಯದಲ್ಲಿ ಧರಿಸುವಂತಹ ಪ್ರತಿಯೊಂದು ಬಣ್ಣವು ಅದರದ್ದೇ ಆದ ಪ್ರಯೋಜನಗಳನ್ನು ಹಾಗೂ ಮಹತ್ವವನ್ನು ಒಳಗೊಂಡಿದೆ. ಭಕ್ತರು ಆಯಾ ದಿನದ ದೇವತೆಯನ್ನು ಗೌರವಿಸಲು ಆ ಬಣ್ಣದ ಉಡುಪನ್ನು ಧರಿಸುತ್ತಾರೆ.
ಯಾವ ದಿನದಂದು ಯಾವ ಬಟ್ಟೆಗಳನ್ನು ಹಾಕುವುದು? ಇಲ್ಲಿದೆ ಮಾಹಿತಿ..
ಅಕ್ಬೋಬರ್ 11 ಶೈಲಪುತ್ರಿ ದೇವಿಗೆ ಪೂಜಿಸಿ ಕಿತ್ತಳೆ ಬಣ್ಣದ ಬಟ್ಟೆ ಧರಿಸಿ. ಇದರಿಂದ ಶಕ್ತಿ ಮತ್ತು ಹೊಳಪು ಜೀವನದಲ್ಲಿ ಆಗಮಿಸುತ್ತದೆ.
ಅಕ್ಬೋಬರ್ 12 ರಂದು ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿ, ಬಿಳಿ ಬಟ್ಟೆಯನ್ನು ಧರಿಸಿ. ಇದರಿಂದಾಗಿ ಶುದ್ಧತೆ, ಶಾಂತಿ ಹಾಗೂ ಸರಳತೆ ಜೀವನದಲ್ಲಿ ಆಗಮಿಸುತ್ತದೆ. ಜೀವನದಲ್ಲಿ ಸಮೃದ್ಧಿ ತುಂಬಿರುತ್ತದೆ.
ಅಕ್ಟೋಬರ್ 13 ರಂದು ಚಂದ್ರಘಟಾ ದೇವಿಗೆ ಪ್ರಾರ್ಥಿಸಿ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ. ಉತ್ಸಾಹ ಹಾಗೂ ಪ್ರೀತಿ ಜೀವನದಲ್ಲಿ ಆಗಮಿಸುತ್ತದೆ.
ಅಕ್ಬೋಬರ್ 14 ರಂದು ಕೂಷ್ಮಾಂಡ ದೇವಿಯನ್ನು ಪೂಜಿಸಿ ಕಡುನೀಲಿ ಬಣ್ಣದ ಬಟ್ಟೆ ಧರಿಸಿ. ದೈವಿಕ ಶಾಂತಿಯನ್ನು ಇದು ಸಂಕೇತಿಸುತ್ತದೆ.
ಅಕ್ಟೋಬರ್ 15 ರಂದು ಸ್ಕಂದಮಾತಾ ತಾಯಿಯನ್ನು ಪೂಜಿಸಿ ಹಳದಿ ಬಣ್ಣದ ಬಟ್ಟೆ ಧರಿಸಿ. ಇದು ಸಂತೋಷ ಹಾಗೂ ಪಾಸಿಟಿವಿಟಿ ತುಂಬುತ್ತದೆ.
ಅಕ್ಟೋಬರ್ 16ರಂದು ಕಾತ್ಯಾಯಿನಿ ದೇವಿಗೆ ಪೂಜಿಸಿ ಹಸಿರು ಬಣ್ಣದ ಬಟ್ಟೆ ಧರಿಸಿ. ಈ ಬಣ್ಣ ಅಭಿವೃದ್ಧಿಯನ್ನು ಸೂಚಿಸುತ್ತದೆ.
ಅಕ್ಟೋಬರ್ 17ರಂದು ಕಾಳರಾತ್ರಿ ತಾಯಿಗೆ ನಮಿಸಿ ಬೂದು ಬಣ್ಣದ ಬಟ್ಟೆ ಧರಿಸಿ. ಇದು ಸಮತೋಲನವನ್ನು ಸಂಕೇತಿಸುತ್ತದೆ.
ಅಕ್ಟೋಬರ್ 18ರಂದು ಮಹಾಗೌರಿಯನ್ನು ಪೂಜಿಸಿ ನೇರಳೆ ಬಣ್ಣದ ಬಟ್ಟೆ ಧರಿಸಿ. ಇದು ಘನತೆ ಹಾಗೂ ಅಧ್ಯಾತ್ಮಕ ನೆರವೇರಿಕೆಯನ್ನು ಸೂಚಿಸುತ್ತದೆ.
ಅಕ್ಟೋಬರ್ 19 ರಂದು ಸಿದ್ಧಿರಾತ್ರಿ ದೇವಿಗೆ ನಮಿಸಿ. ನವಿಲು ಹಸಿರು ಬಣ್ಣದ ಬಟ್ಟೆ ಧರಿಸಿ. ಹೃದಯ ಸಂತೋಷದಿಂದ ತುಂಬುತ್ತದೆ.



