ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ಮಾಜಿ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧುಗೆ ಸಂಕಷ್ಟ ಎದುರಾಗಿದೆ.
ಇತ್ತೀಚೆಗೆಪತ್ನಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು, ಆದ್ರೆ ಆಕೆ ಈ ಭೀಕರ ಕಾಯಿಲೆಯನ್ನು ಗೆಲ್ಲಲು ಆಹಾರ ಶೈಲಿ ದೊಡ್ಡ ಪಾತ್ರ ವಹಿಸಿತು ಎಂದು ಪೋಸ್ಟ್ ಮಾಡಿದ್ದರು. ಇದು ಕೌರ್ , ಕ್ಯಾನ್ಸರ್ ಸಂದರ್ಭದಲ್ಲಿ ಯಾವೆಲ್ಲಾ ಡಯೆಟ್ ಫಾಲೋ (diet) ಮಾಡಿದ್ದಾರೆ ಎಂಬುದನ್ನು ತಿಳಿಸಿದ್ದರು. ಪತ್ನಿ ನವಜೋತ್ ಕೌರ್ ಅವರು ಗೆದ್ದು ಬರಲು ವಿಶೇಷ ಆಹಾರ ಶೈಲಿಯೇ ಕಾರಣ ಎಂದು ಪೋಸ್ಟ್ ಮೂಲಕ ತಿಳಿಸಿದ್ದರು. ಆದ್ರೆ ಇದಕ್ಕೆ ತೀವ್ರ ವಿರೋಧವೂ ವ್ಯಕ್ತವಾಗಿತ್ತು. ಆದ್ರೆ ಇದೀಗ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್‌ಗೆ ದೊಡ್ಡ ಸಂಕಷ್ಟವೊಂದು ಎದುರಾಗಿದೆ.
ವಜೋತ್ ಸಿಂಗ್ ಸಿಧು ಅವರ ಪತ್ನಿಗೆ ಇದೀಗ ಛತ್ತೀಸ್‌ಗಢ ಸಿವಿಲ್ ಸೊಸೈಟಿ ಲೀಗಲ್ ನೋಟಿಸ್ ನೀಡಿದೆ. ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಅವರ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನು ಏಳು ದಿನಗಳಲ್ಲಿ ಸಲ್ಲಿಸುವಂತೆ ನೋಟಿಸ್‌ನಲ್ಲಿ ಕೇಳಲಾಗಿದ್ದು, ಒಂದು ವೇಳೆ ಇದರಿಂದ ವಿಫಲವಾದ್ರೆ 850 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನೋಟಿಸ್‌ನಲ್ಲಿ ಒತ್ತಾಯಿಸಲಾಗಿದೆ.
4ನೇ ಹಂತದ ಕ್ಯಾನ್ಸರ್‌ನಿಂದ ತಮ್ಮ ಪತ್ನಿ ಸಂಪೂರ್ಣ ಚೇತರಿಸಿಕೊಂಡಿರುವ ಕುರಿತು ಪತ್ರಿಕಾಗೋಷ್ಠಿಯಲ್ಲಿ ಸಿಧು ಅವರು ಇತ್ತೀಚೆಗೆ ಹೇಳಿಕೊಂಡಿದ್ದರು. ಇದರಲ್ಲಿ ಅವರು ಕೇವಲ 40 ದಿನಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ, ಅದೂ ಕೂಡ ವಿಶೇಷ ಆಹಾರ ಕ್ರಮದಿಂದ ಎಂದು ಹೇಳಿದ್ದರು. ಆದ್ರೆ ಸಿಧು ಅವರ ಈ ಹೇಳಿಕೆ ವೈದ್ಯಕೀಯ ರಂಗದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. ತಮ್ಮ ಪತ್ನಿ 4ನೇ ಹಂತದ ಕ್ಯಾನ್ಸರ್‌ನಿಂದ ಹೊರಬರಲು ವಿಶೇಷ ಆಹಾರ ಪದ್ಧತಿಯೇ ಪ್ರಮುಖ ಕಾರಣ ಎಂದು ಸಿಧು ಹೇಳಿಕೊಂಡಿದ್ದರು.
ಪತ್ನಿ ಬದುಕುಳಿಯುವ ಸಾಧ್ಯತೆ ಶೇ.5 ಮಾತ್ರ ಎಂದು ವೈದ್ಯರು ಹೇಳಿದ್ದರು. ಆದರೆ ಅರಿಶಿನ, ಬೇವಿನ ನೀರು, ಆ್ಯಪಲ್ ಸೈಡರ್ ವಿನೆಗರ್ ಮತ್ತು ನಿಂಬೆ ನೀರು, ಇವುಗಳಿಂದ ಕ್ಯಾನ್ಸರ್‌ನಿಂದ ಗುಣಮುಖರಾಗಿ ಕೇವಲ 40 ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ಹೇಳಿದ್ದರು.
ಸಿಧು ಅವರ ಈ ಹೇಳಿಕೆಯನ್ನ ಅನೇಕ ಜನರು, ವಿಶೇಷವಾಗಿ ವೈದ್ಯರು ಬಲವಾಗಿ ಖಂಡಿಸಿದರು. ಇದು ಭಾರೀ ವಿವಾದಕ್ಕೂ ಕಾರಣವಾಯಿತು. ಇನ್ನು ಛತ್ತೀಸ್‌ಗಢ ಸಿವಿಲ್ ಸೊಸೈಟಿ ಈ ಹೇಳಿಕೆಯನ್ನ ಖಂಡಿಸಿದೆ. ಸಿಧು ಅವರ ಹೇಳಿಕೆಗಳು, ಆಸ್ಪತ್ರೆಗಳ ವಿರುದ್ಧವಾಗಿದೆ. ಈ ರೀತಿಯ ಹೇಳಿಕೆಗಳು ಸಂಶಯಾಸ್ಪದ, ದಾರಿತಪ್ಪಿಸುವ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವವರಿಗೂ ಅಪಾಯಕಾರಿ ಎಂದು ಸೊಸೈಟಿಯ ಸಂಚಾಲಕ ಡಾ. ಕುಲದೀಪ್ ಸೋಲಂಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.