ಹೊಸದಿಗಂತ ವರದಿ, ತಿಪಟೂರು :
ತಾಲ್ಲೂಕಿನ ಆದಿಚುಂಚನಗಿರಿ ಶಾಖಾ ಮಠ ದಸರಿಘಟ್ಟ ಕ್ಷೇತ್ರದ ಶ್ರೀ ಚೌಡೇಶ್ವರಿ ದೇವಿಯ ದೇವಾಲಯದಲ್ಲಿ ಶ್ರೀ ಚೌಡೇಶ್ವರಿ ದೇವಿಗೆ 32ನೇ ವರ್ಷದ ನವರಾತ್ರಿ ಪೂಜಾ ಮಹೋತ್ಸವದ ಅಂಗವಾಗಿ ವಿಶೇಷ ಪೂಜಾಕಾರ್ಯಕ್ರಮಗಳು ಮತ್ತು ಅಲಂಕಾರ ಅ.2 ರಿಂದ ಅ.12ರವರಗೆ ನಡೆಯಲಿದೆ ಎಂದು ಕ್ಷೇತ್ರದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದ್ದಾರೆ.
ಅ.2ರಂದು ಚೌಡೇಶ್ವರಿ ಹಾಗೂ ಕರಿಯಮ್ಮದೇವಿಯವರಿಗೆ ಅಭಿಷೇಕ, ಮಹಾಮಂಗಳಾರತಿ, ದುರ್ಗಾಹೋಮ, ದೇವಿಪಾರಾಯಣ, ಅ.3ರಂದು ರಜತ ಕವಚ ಮತ್ತು ನಿಂಬೆಹಣ್ಣಿನ ಅಲಂಕಾರ, ಅ.4ರಂದು ಅರಿಶಿನ ಅಲಂಕಾರ ಹಾಗೂ ಪುಪ್ಪಾಲಂಕಾರ, ಅ.5ರಂದು ಸಿರಿಧಾನ್ಯ ಹಾಗೂ ಸಿಹಿ ಖಾದ್ಯ ಅಲಂಕಾರ, ಅ.6 ರಂದು ಧನಲಕ್ಷ್ಮೀ ಹಾಗೂ ಬಳೆ ಅಲಂಕಾರ, ಅ.7ರಂದು ಬಳೆ ಹಾಗೂ ವೀಳ್ಯದ ಎಲೆ ಅಲಂಕಾರ, ಅ.8ರಂದು ಧನಲಕ್ಷ್ಮೀ ಹಾಗೂ ಕದಳೀ ಫಲ ಅಲಂಕಾರ, ಅ.9 ರಂದು ಗಾಯತ್ರಿ ಹಾಗೂ ಹಾಗೂ ಮಹಿಷಾಸುರಮರ್ಧಿನಿ ಅಲಂಕಾರ, ಅ.10ರಂದು ಸರಸ್ವತಿ ಹಾಗೂ ಹೋಳಿಗೆ ಅಲಂಕಾರ, ಅ.11ರಂದು ಮಹಾಕಾಳಿ ಹಾಗೂ ಶಾಖಾಂಬರಿ ಅಲಂಕಾರ, ಅ.12 ರಂದು ರುದ್ರಾಕ್ಷಿ ಹಾಗೂ ಕುಂಕುಮ ಅಲಂಕಾರ ಮಾಡಲಾಗುವುದು.
ಅ.12ರ ಮಧ್ಯಾಹ್ನ 12 ಗಂಟೆಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಾಲಾನಂದನಾಥಸ್ವಾಮೀಜಿಯವರ ಸಾನಿಧ್ಯದೊಂದಿಗೆ ಶ್ರೀ ಚೌಡೇಶ್ವರಿ ದೇವಿಯವರ “ಮುಳ್ಳುಗದ್ದಿಗೆ ಉತ್ಸವ” ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾಧಿಗಳು ಆಗಮಿಸಿ ದೇವಿಯವರ ಕೃಪೆ ಪಾತ್ರರಾಗಬೇಕೆಂದರು.