ಹೊಸದಿಗಂತ ಡಿಜಿಟಲ್ ಡೆಸ್ಕ್:
ನಕ್ಸಲರು ಸರ್ಕಾರಕ್ಕೆ ಶರಣಾಗಲಿಲ್ಲ, ಸರ್ಕಾರ ನಕ್ಸಲರಿಗೆ ಶರಣಾಯಿತು. ಇಷ್ಟು ವರ್ಷ ಸಿಗದವರು ಈಗ ಹೇಗೆ ಸಿಕ್ಕರು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.
ಚಿತ್ರದುರ್ಗದ ಮಾದಾರಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಕ್ಸಲರು ಬರಿಗೈಯಲ್ಲಿ ಶರಣಾಗಿದ್ದಾರೆ. ಅವರ ಆಯುಧಗಳು ಎಲ್ಲಿವೆ? ಇವರ ಹಿಂದೆ ಇನ್ನೆಷ್ಟು ನಕ್ಸಲೀಯರಿದ್ದಾರೆ? ಆಯುಧಗಳನ್ನು ಅವರಿಗೆ ಹಸ್ತಾಂತರಿಸಲಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಕ್ಸಲರನ್ನು ನ್ಯಾಯಾಲಯ ಮತ್ತು ಪೊಲೀಸರಿಗೆ ಒಪ್ಪಿಸಬೇಕು. ಸಿಎಂ ಮುಂದೆ ನಕ್ಸಲರ ಶರಣಾಗತಿ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.