ಛತ್ತೀಸ್‌ಗಢದಲ್ಲಿ ಇಬ್ಬರು ನಾಗರಿಕರ ಹತ್ಯೆ ಮಾಡಿದ ನಕ್ಸಲರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಕ್ಸಲರು ಇಬ್ಬರು ನಾಗರಿಕರನ್ನು ಹತ್ಯೆ ಮಾಡಿದ್ದಾರೆ.

ಮೃತರನ್ನು ಕರಮ್ ರಾಜು (32) ಮತ್ತು ಮದ್ವಿ ಮುನ್ನಾ (27) ಎಂದು ಗುರುತಿಸಲಾಗಿದೆ. ಅದೇ ಊರಿನ ಗ್ರಾಮಸ್ಥರು ಎಂದು ತಿಳಿಯಲಾಗಿದೆ.

ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಸೋಮವಾರ ರಾತ್ರಿ ನಕ್ಸಲರು ಬುಗ್ಡಿಚೆರು ಗ್ರಾಮದಲ್ಲಿ ಇಬ್ಬರನ್ನು ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!