ತಲೆಗೆ ಜಾರ್ಖಂಡ್ ಸರ್ಕಾರ 19 ಲಕ್ಷ ಬಹುಮಾನ ಘೋಷಿಸಿದ್ದ ನಕ್ಸಲ್‌ ಕಮಾಂಡರ್ ಪೊಲೀಸರಿಗೆ ಶರಣಾಗತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಾರ್ಖಂಡ್‌ನ ನಕ್ಸಲರ ಪ್ರಮುಖ ನಾಯಕ ಮತ್ತು ಸಿಪಿಐ-ಮಾವೋವಾದಿ ಸಂಘಟಕರ ಪ್ರಾದೇಶಿಕ ಕಮಾಂಡರ್ ಅಮನ್ ಗಂಜು ಇಂದು ಜಾರ್ಖಂಡ್ ಪೊಲೀಸರು ಮತ್ತು ಸಿಆರ್‌ಪಿಎಫ್ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಅಮನ್ ಗಂಜು ತಲೆಗೆ 19 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಜಾರ್ಖಂಡ್ ಸರ್ಕಾರ ಅಮನ್ ಗಂಜು ಪತ್ತೆ ಮಾಡುವವರಿಗೆ 15 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.

ಅಲ್ಲದೆ, ರಾಷ್ಟ್ರೀಯ ತನಿಖಾ ಸಂಸ್ಥೆ ಕೂಡ 4 ಲಕ್ಷ ರೂ ಬಹುಮಾನ ಘೋಷಿಸಿತ್ತು. ಆಪರೇಷನ್ ಐಜಿ ಎವಿ ಹೋಮ್ ಕರ್, ರಾಂಚಿ ವಲಯ ಐಜಿ ಪಂಕಜ್ ಕಾಂಬೋಜ್ ಮತ್ತು ಗರ್ವಾ ಎಸ್ಪಿ ಅಂಜನಿ ಝಾ ಅವರ ಸಮ್ಮುಖದಲ್ಲಿ ಅಮನ್ ಗುಂಜು ಶರಣಾಗಿದ್ದಾರೆ.

ಜಾರ್ಖಂಡ್‌ನ ಲತೇಹರ್, ಲೋಹರ್ ದಗಾ ಮತ್ತು ಗುಮ್ಲಾ ಪ್ರದೇಶಗಳಲ್ಲಿ ಗಂಜು ಪ್ರಮುಖ ಪಾತ್ರ ವಹಿಸಿದ್ದರು. 2004ರಲ್ಲಿ ಮಾವೋವಾದಿ ಸಂಘಟನೆಗೆ ಸೇರಿದ್ದರು. ಈತನ ವಿರುದ್ಧ ಒಟ್ಟು 17 ಪ್ರಕರಣಗಳಿವೆ. ಈ ಪೈಕಿ ಗರ್ವಾ ಜಿಲ್ಲೆಯಲ್ಲಿ 10 ಮತ್ತು ಲತೇಹರ್ ಜಿಲ್ಲೆಯಲ್ಲಿ 7 ಪ್ರಕರಣಗಳು ದಾಖಲಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!