ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಒಂದು ವರ್ಷದ ಹಿಂದೆ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದರು. ಎರಡೂ ಮಕ್ಕಳಿಗೆ ಉಯರ್ ರುದ್ರೋ ನೀಲ್ ಮತ್ತು ಉಲಗ್ ದೈವಿಕ್ ಎಂದು ಹೆಸರಿಸಿದ್ದಾರೆ. ಅಂದಿನಿಂದ ಪ್ರತಿ ಹಬ್ಬಕ್ಕೂ ಮಕ್ಕಳ ಫೋಟೋಗಳನ್ನು ಹಾಕುತ್ತಲೇ ಬಂದಿದ್ದಾರೆ. ಮೊದಲ ಬಾರಿಗೆ, ನಯನಾತಾರಾ ದಂಪತಿ ತಮ್ಮ ಅವಳಿ ಮಕ್ಕಳ ಮುಖವನ್ನು ತೋರಿಸುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ನಯನ್ – ವಿಘ್ನೇಶ್ ಉಯರ್ ಮತ್ತು ಉಲಗ್ ಅವರ ಮೊದಲ ಹುಟ್ಟುಹಬ್ಬವನ್ನು ಮಲೇಷ್ಯಾದಲ್ಲಿ ಆಚರಿಸಿದರು. ಮಲೇಷ್ಯಾದ ಕೌಲಾಲಂಪುರ್ ಟ್ವಿನ್ ಟವರ್ಸ್ ನಲ್ಲಿ ಮಕ್ಕಳನ್ನು ಎತ್ತಿ ಮುದ್ದಾಡುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ʻನಮ್ಮ ಮುದ್ದ ಬಂಗಾರ ನೀವುಗಳು, ನಮ್ಮ ಜೀವನದಲ್ಲಿ ನೀವು ಬಂದ ಬಳಿಕ ನಮ್ಮ ಜೀವನವನ್ನು ತುಂಬಾ ಸಂತೋಷ ಮತ್ತು ಬಣ್ಣಬಣ್ಣದ ದೀಪಗಳಿಂದ ತುಂಬಿವೆ. ನಿಮ್ಮಬ್ಬರಿಗೂ ಜನ್ಮದಿನದ ಶುಭಾಶಯಗಳು ಎಂದು ಪೋಸ್ಟ್ ಮಾಡಿದ್ದಾರೆ.