ಹೊಸದಿಗಂತ ಡಿಜಿಟಲ್ ಡೆಸ್ಕ್
ಪವಿತ್ರ ನಗರಿ ವಾರಣಾಸಿಗೆ ʼಆಧ್ಯಾತ್ಮಿಕ ಪ್ರಯಾಣʼ ಕೈಗೊಂಡಿರುವ ಖ್ಯಾತ ಬ್ಯಾಸ್ಕೆಟ್ ಬಾಲ್ ಆಟಗಾರ ಡ್ವೈಟ್ ಹೊವಾರ್ಡ್, ವಾರಣಾಸಿಯನ್ನು ಸ್ವಚ್ಛ, ಸುಂದರ ನಗರವನ್ನಾಗಿ ಅಭಿವೃದ್ಧಿಪಡಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಮನಸ್ಪೂರ್ತಿಯಾಗಿ ಶ್ಲಾಘಿಸಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ವಾರಣಾಸಿಯ ಆಧ್ಯಾತ್ಮಿಕ ಪ್ರಯಾಣ ನನ್ನ ಆತ್ಮವನ್ನು ಪುನರುಜ್ಜೀವನಗೊಳಿಸಿದೆ.
ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡಿದ ನಂತರ ನನ್ನೊಳಗೆ ಶಾಂತಿ ನೆಲೆಯಾಗಿದೆ. ಪವಿತ್ರ ನಗರವನ್ನು ಅತ್ಯದ್ಭುತ ರೀತಿಯಲ್ಲಿ ಅಭಿವೃದ್ಧಿಪಡಿಸಿದ ಪ್ರಧಾನಿ ಮೋದಿ ಅವರಿಗೆ ಅಭಿನಂದನೆಗಳು. ವಾರಣಾಸಿಯು ಅನೇಕ ಅನೇಕ ಜನರಿಗೆ ಆಧ್ಯಾತ್ಮಿಕವಾಗಿ ಸ್ಫೂರ್ತಿ ನೀಡಿದೆ, ಈ ಭೇಟಿಗೆ ನಾನು ವಿನಮ್ರನಾಗಿದ್ದೇನೆ. ಈ ಪವಿತ್ರ ನಗರದ ಪುನರ್ ನಿರ್ಮಾಣವು ಇನ್ನೂ ಹಲವರನ್ನು ಪ್ರೇರೇಪಿಸುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಬರೆದುಕೊಂಡಿದ್ದಾರೆ.
ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಕೂಡ ಬಾಸ್ಕೆಟ್ಬಾಲ್ ಆಟಗಾರನ ಭೇಟಿಯ ಕುರಿತಾಗಿ ಮಾಹಿತಿ ನೀಡಿದೆ.
World-renowned basketball player and NBA champion @DwightHoward traveled to #Varanasi. He enjoyed witnessing the transcendental Ganga Aarti and shared his experience on his visit to this ancient city of spirituality & culture. #UPNahiDekhaTohIndiaNahiDekha https://t.co/7CLag9PIa5
— UP Tourism (@uptourismgov) April 27, 2022
ವಿಶ್ವ-ಪ್ರಸಿದ್ಧ ಬ್ಯಾಸ್ಕೆಟ್ಬಾಲ್ ಆಟಗಾರ ಮತ್ತು ಎನ್ ಬಿಎ ಚಾಂಪಿಯನ್ ಡ್ವೈಟ್ ಹೊವಾರ್ಡ್ ವಾರಣಾಸಿಗೆ ಆಗಮಿಸಿದ್ದರು. ಅವರು ಗಂಗಾ ಆರತಿಯನ್ನು ವೀಕ್ಷಿಸಿದರು. ಜೊತೆಗೆ ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯ ಸಮ್ಮಿಲನವಾದ ಈ ಪ್ರಾಚೀನ ನಗರಕ್ಕೆ ತಮ್ಮ ಭೇಟಿಯ ಅನುಭವವನ್ನು ಹಂಚಿಕೊಂಡರು. ಎಂದು ಯುಪಿ ಪ್ರವಾಸೋದ್ಯಮ ಟ್ವೀಟ್ ಮಾಡಿದೆ.
ಹೊವಾರ್ಡ್ ಪ್ರಸ್ತುತ ಉತ್ತರ ಅಮೆರಿಕಾದ ʼವೃತ್ತಿಪರ ಬ್ಯಾಸ್ಕೆಟ್ಬಾಲ್ ಲೀಗ್ʼ ಎನ್ ಬಿಎನಲ್ಲಿ ʼಲಾಸ್ ಆಂಗಲ್ಸ್ ಲೇಕರ್ಸ್ʼ ತಂಡದ ಸೆಂಟರ್-ಫಾರ್ವರ್ಡ್ ಆಟಗಾರನಾಗಿ ಆಡುತ್ತಿದ್ದಾರೆ.