ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(NCB) ಮತ್ತು ದೆಹಲಿ ವಿಶೇಷ ಸೆಲ್ನ ಪೊಲೀಸರು ಮೇಥ ಪ್ರಯೋಗಾಲದ ಮೇಲೆ ನಡೆಸಿದ ದಾಳಿಯಲ್ಲಿ ಬರೋಬ್ಬರಿ 95 ಕೆ.ಜಿ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ತಿಹಾರ್ ಜೈಲ್ನ ವಾರ್ಡನ್, ದೆಹಲಿ ಉದ್ಯಮಿ ಮತ್ತು ಮುಂಬೈ ಮೂಲದ ರಸಾಯನಶಾಸ್ತ್ರಜ್ಞ ಮೂವರು ಸೇರಿ ನಡೆಸುತ್ತಿದ್ದ ಮೇಥ ಲ್ಯಾಬ್ ಎಂಬುವುದು ತಿಳಿದು ಬಂದಿದೆ.
ಕಾರ್ಯಚರಣೆಯಲ್ಲಿ ವಿವಿಧ ಔಷಧಿಗಳು ಸೇರಿದಂತೆ ಅಂದಾಜು 95 ಕೆಜಿ ಮೇಥಪೈಂಟಮನ್ ರಾಸಾಯನಿಕವನ್ನು ಮತ್ತು ಅತ್ಯಧುನಿಕ ಉತ್ಪಾದನ ಯಂತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಸ್ಥಳದಲ್ಲೇ ದೆಹಲಿ ಮೂಲದ ಉದ್ಯಮಿಯನ್ನು ಬಂಧಿಸಿದ್ದು, ಇವನನ್ನು ಈ ಮುಂಚೆ ಮಾದಕವಸ್ತು ಪ್ರಕರಣದಲ್ಲಿ ಕಂದಾಯ ಗುಪ್ತಚರ ಇಲಾಖೆ ಬಂಧಿಸಿತ್ತು. ಇವನು ತಿಹಾರ್ ಜೈಲ್ನ ವಾರ್ಡನ್ ಜತೆ ಸಂಪರ್ಕ ಹೊಂದಿದ್ದು, ಮಾದಕವಸ್ತು(ಡ್ರಗ್ಸ್) ಉತ್ಪಾದನೆಗೆ ಬೇಕಾದ ರಾಸಾಯನಿಕ ಮತ್ತು ಉಪಕರಣಗಳನ್ನಯ ಖರೀದಿಸಲು ಸಹಾಯ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಚಾರಣೆಯಲ್ಲಿ ಬಂಧಿತರಾಗಿರುವ ನಾಲ್ಕು ಆರೋಪಿಗಳನ್ನು ಮ್ಯಾಜಿಸ್ಟೇಟ್ ಕೋರ್ಟ್ಗೆ ಹಾಜರುಪಡಿಸಿ, ಹೆಚ್ಚಿನ ತನಿಖೆಗೆಗಾಗಿ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇದೇ ವಿಚಾರವಾಗಿ ಮತ್ತೊಂದು ಕಡೆ ನಡೆದ ದಾಳಿಯಲ್ಲಿ ಉದ್ಯಮಿಯ ಸಹಚರನ್ನು ಕೂಡ ಬಂಧಿಸಲಾಗಿದೆ.