12ನೇ ತರಗತಿ ರಾಜ್ಯಶಾಸ್ತ್ರ ಪಠ್ಯದಿಂದ ಖಾಲಿಸ್ತಾನ ಕುರಿತ ವಿಷಯ ತೆಗೆದ ಎನ್‌ಸಿಇಆರ್‌ಟಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿಯು 12ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯದಿಂದ ಪ್ರತ್ಯೇಕ ಖಾಲಿಸ್ತಾನ ದೇಶದ ಬೇಡಿಕೆ ಕುರಿತ ವಿಷಯವನ್ನು ತೆಗೆದು ಹಾಕಿದೆ.

ಶಿರೋಮಣಿ ಗುರುದ್ವಾರ ಪರಬಂಧಕ್‌ ಸಮಿತಿ ಆಕ್ಷೇಪದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಿಖ್ಖರ ಐತಿಹಾಸಿಕ ಮಾಹಿತಿ ಕುರಿತಂತೆ ಎನ್‌ಸಿಇಆರ್‌ಟಿಯು ರಾಜ್ಯಶಾಸ್ತ್ರ ಪಠ್ಯದಲ್ಲಿ ತಪ್ಪಾಗಿ ವಿವರಿಸಿದೆ ಎಂದು ಎಸ್‌ಜಿಪಿಸಿ ಆಕ್ಷೇಪ ವ್ಯಕ್ತಪಡಿಸಿತ್ತು.

‘ಸ್ವಾತಂತ್ರ್ಯಾನಂತರದ ಭಾರತದ ರಾಜಕೀಯ’ಎಂಬ ಪಠ್ಯದಲ್ಲಿ ಆನಂದಪುರ ಸಾಹಿಬ್ ನಿರ್ಣಯದ ಕುರಿತಂತೆ ಉಲ್ಲೇಖವನ್ನು ಸಿಖ್ ಸಮಿತಿಯು ವಿರೋಧಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!