ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ರಾಜ್ಯಪಾಲ, ರಾಜಸ್ಥಾನದ ಜಗದೀಪ್ ಧಂಕರ್ ಮುಂಬರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟದ ಅಭ್ಯರ್ಥಿಯಾಗಿರಲಿದ್ದಾರೆ.ಶನಿವಾರ ನಡೆದ ಬಿಜೆಪಿಯ ಸಂಸದೀಯ ಮಂಡಳಿ ಸಭೆಯ ಬಳಿಕ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಈ ಘೋಷಣೆ ಮಾಡಿದ್ದಾರೆ.
Kisan Putra Jagdeep Dhankhar Ji is known for his humility. He brings with him an illustrious legal, legislative and gubernatorial career. He has always worked for the well-being of farmers, youth, women and the marginalised. Glad that he will be our VP candidate. @jdhankhar1 pic.twitter.com/TJ0d05gAa8
— Narendra Modi (@narendramodi) July 16, 2022
ಘೋಷಣೆ ಬೆನ್ನಲ್ಲೇ ಶುಭ ಹಾರೈಸಿದ ಪ್ರಧಾನಿ ಮೋದಿ, ‘ಜಗದೀಪ್ ಧನಕರ್ ಅವರು ನಮ್ಮ ಸಂವಿಧಾನದ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿದ್ದಾರೆ. ಅವರು ಶಾಸಕಾಂಗ ವ್ಯವಹಾರಗಳ ಬಗ್ಗೆಯೂ ಚೆನ್ನಾಗಿ ತಿಳಿದಿದ್ದಾರೆ. ಅವರು ರಾಜ್ಯಸಭೆಯಲ್ಲಿ ಉತ್ತಪ ಅಧ್ಯಕ್ಷರಾಗುತ್ತಾರೆ ಮತ್ತು ರಾಷ್ಟ್ರೀಯ ಪ್ರಗತಿಯನ್ನು ಹೆಚ್ಚಿಸುವ ಉದ್ದೇಶದಿಂದ ಸದನದ ಕಲಾಪಗಳಿಗೆ ಮಾರ್ಗದರ್ಶನ ನೀಡುತ್ತಾರೆ ಎಂದು ನನಗೆ ಖಾತ್ರಿಯಿದೆ. ರೈತನ ಮಗ ಜಗದೀಪ್ ಧಂಕರ್ ಅವರು ತಮ್ಮ ನಮ್ರತೆಗೆ ಹೆಸರುವಾಸಿಯಾಗಿದ್ದಾರೆ. ಅವರು ನಮ್ಮೊಂದಿಗೆ ಸುಪ್ರಸಿದ್ಧ ಕಾನೂನು, ಶಾಸಕಾಂಗ ಮತ್ತು ಗವರ್ನಟೋರಿಯಲ್ ಅನುಭವವನ್ನೂ ಹೊಂದಿದ್ದಾರೆ. ರೈತರು, ಯುವಕರು, ಮಹಿಳೆಯರು ಮತ್ತು ಹಿಂದುಳಿದವರ ಏಳಿಗೆಗಾಗಿ ಅವರು ಸದಾ ಶ್ರಮಿಸಿದ್ದಾರೆ. ಅವರೇ ನಮ್ಮ ಅಭ್ಯರ್ಥಿಯಾಗುವುದು ಖುಷಿ ತಂದಿದೆ’ ಎಂದು ಹೇಳಿದ್ದಾರೆ.