ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಯಾಲಿಫೋರ್ನಿಯಾದ ಡೆವಿಲ್ಸ್ ಸ್ಲೈಡ್ ಬಳಿಯ ಪ್ರಪಾತಕ್ಕೆ ಟೆಸ್ಲಾ ಕಾರು ಬಿದ್ದಿದ್ದು, ಇದು ಉದ್ದೇಶಪೂರ್ವಕ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪತ್ನಿ, ಮಕ್ಕಳ ಜತೆ ಕಾರು ಚಲಾಯಿಸುತ್ತಿದ್ದ ಭಾರತೀಯ ಮೂಲದ ವ್ಯಕ್ತಿ ಬೇಕಂತಲೇ ಕಾರನ್ನು ಪ್ರಪಾತಕ್ಕೆ ಉರುಳಿಸಿದ್ದು, ಕೊಲೆ ಯತ್ನ ಆರೋಪದಲ್ಲಿ ಆತನನ್ನು ಬಂಧಿಸಲಾಗಿದೆ.
ಕ್ಯಾಲಿಫೋರ್ನಿಯಾ ನಿವಾಸಿ ಧರ್ಮೇಶ್ ಎ. ಪಟೇಲ್ ತಮ್ಮ ಪತ್ನಿ ಹಾಗೂ ಮಕ್ಕಳ ಜತೆ ಡೆವಿಲ್ಸ್ ಸ್ಲೈಡ್ ಬಳಿ ಪ್ರಯಾಣಿಸುತ್ತಿದ್ದರು. ತಿರುವಿನಲ್ಲಿ ಇದ್ದಕ್ಕಿದ್ದಂತೆಯೇ ಕಾರನ್ನು ಪ್ರಪಾತಕ್ಕೆ ಉರುಳಿಸಲಾಗಿತ್ತು. ೩೦೦ ಅಡಿ ಪ್ರಪಾತಕ್ಕೆ ಉರುಳಿದರೂ ಯಾರೊಬ್ಬರ ಜೀವಕ್ಕೂ ಹಾನಿಯಾಗಿಲ್ಲ.
ಧರ್ಮೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾದ ನಂತರ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.