ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಜೋಶಿಮಠದಲ್ಲಿ ಭೂಮಿ ಕುಸಿದಿದ್ದು, ಪಟ್ಟಣದ ಹಲವು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಾತನಾಡಿ, ಜಿಲ್ಲೆಯ ಜನರನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಿಎಂ ಧಾಮಿ ಶೀಘ್ರದಲ್ಲೇ ಜೋಶಿಮಠಕ್ಕೆ ಭೇಟಿ ನೀಡಲಿದ್ದು, ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ಅಗತ್ಯ ಕ್ರಮಗಳನ್ನು ಪ್ರಾರಂಭಿಸಲಿದ್ದಾರೆ.
ಮುಂದಿನ ದಿನಗಳಲ್ಲಿ ಜೋಶಿಮಠಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಭಾಯಿಸಲು ಕ್ರಮಕೈಗೊಳ್ಳುತ್ತೇನೆ. ಎಲ್ಲಾ ವರದಿಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಜಿಲ್ಲೆಯ ಸ್ಥಿತಿಗತಿಯ ಬಗ್ಗೆ ನಿಗಾ ವಹಿಸಲು ನಗರಸಭೆ ಅಧ್ಯಕ್ಷ ಶೈಲೇಂದ್ರ ಪವಾರ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿದರು.
ಜೋಶಿಮಠ ಪುರಸಭೆ ಅಧ್ಯಕ್ಷ ಶೈಲೇಂದ್ರ ಪವಾರ ಮಾತನಾಡಿ, ಮಾರ್ವಾಡಿ ವಾರ್ಡ್ನಲ್ಲಿ ನೆಲದೊಳಗಿನ ನೀರು ಸೋರಿಕೆಯಾಗಿ ಮನೆಗಳಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿದೆ. ಚಮೋಲಿ ಜಿಲ್ಲೆಯ ಜೋಶಿಮಠ್ ಟೌನ್ ಪ್ರದೇಶದಲ್ಲಿ ಭೂಮಿ ಕುಸಿತದ ಘಟನೆಗಳಿಂದಾಗಿ ಜನರು ತಮ್ಮ ಮನೆಗಳಿಂದ ಸುರಕ್ಷಿತ ಸ್ಥಳಗಳಿಗೆ ಪಲಾಯನ ಮಾಡುತ್ತಿದ್ದಾರೆ.
ಜೋಶಿಮಠ ಪಟ್ಟಣದ ಒಂಭತ್ತು ವಾರ್ಡ್ಗಳು ಭೂಕುಸಿತದಿಂದ ಭಾರಿ ಹಾನಿಗೊಳಗಾಗಿವೆ. ನಗರ ಪ್ರದೇಶದ ಮನೆಗಳ ಗೋಡೆಗಳು ಮತ್ತು ಮಹಡಿಗಳಲ್ಲಿನ ಬಿರುಕುಗಳು ದಿನದಿಂದ ದಿನಕ್ಕೆ ಆಳವಾಗುತ್ತಿದ್ದು, ಜನರಲ್ಲಿ ಎಚ್ಚರಿಕೆಯ ಗಂಟೆಯಾಗಿವೆ. ಈ ಕುಸಿತದಿಂದ ನಗರ ಪ್ರದೇಶದ 576 ಮನೆಗಳ 3000 ಕ್ಕೂ ಹೆಚ್ಚು ಜನರು ತೊಂದರೆಗೀಡಾಗಿದ್ದಾರೆ. ನಗರಸಭೆಯಿಂದ ಎಲ್ಲ ಮನೆಗಳ ಸಮೀಕ್ಷೆ ನಡೆಯುತ್ತಿದ್ದು, ಹಲವರು ಮನೆಗಳನ್ನೂ ತೊರೆದಿದ್ದಾರೆ.