ಕತ್ತಲ ಸಮಯ ಹತ್ತಿರ: ಸ್ಲೀಪ್ ಮೂಡ್‌‌ ನತ್ತ ಪ್ರಗ್ಯಾನ್ ರೋವರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಂದ್ರನ ಮೇಲೆ ಪ್ರಗ್ಯಾನ್ ರೋವರ್ ಅಧ್ಯಯನ ನಡೆಸುತ್ತಿದ್ದು, ಈ ವೇಳೆ 100 ಮೀಟರ್ ಸಂಚರಿಸಿ ಹಲವು ಮಾಹಿತಿಯನ್ನು ರವಾನಿಸಿದೆ. ಇದೀಗ ಚಂದ್ರನ ಮೇಲೆ ಕತ್ತಲ ಸಮಯ ಸಮೀಪಿಸುತ್ತಿದೆ. ಹೀಗಾಗಿ ಚಂದ್ರನ ಮೇಲೆ ಕಳೆದ 10 ದಿನಗಳಿಂದ ಸಂಚರಿಸುತ್ತಿರುವ ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ಶೀಘ್ರದಲ್ಲೇ ನಿದ್ರೆಗೆ ಜಾರಲಿದೆ.

ಚಂದ್ರನ ಒಂದು ಹಗಲು ಎಂದರೆ ಭೂಮಿಯ 14 ದಿನ. ಹೀಗಾಗಿ ಇನ್ನು ನಾಲ್ಕು ದಿನದಲ್ಲಿ ಚಂದ್ರನ ಮೇಲೆ ಕತ್ತಲು ಆವರಿಸಲಿದೆ. ಈ ವೇಳೆ ಚಂದ್ರನ ಮೇಲಿ ತಾಪಮಾನ 200 ಡಿಗ್ರಿ ಸೆಲ್ಸಿಶಿಸ್‌ಗಿಂತ ಕಡಿಮೆಕ್ಕೆ ಇಳಿಯಲಿದೆ. ಈ ತಾಪಮಾನವನ್ನು ತಡೆದುಕೊಳ್ಳುವ ಸಲವಾಗಿ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್‌ನ್ನು ಸ್ಲೀಪ್ ಮೂಡ್‌‌ನಲ್ಲಿ ಇಡಲಾಗುವುದು ಎಂದು ಇಸ್ರೋ ಚೇರ್ಮನ್ ಎಸ್ ಸೋಮನಾಥ್ ಹೇಳಿದ್ದಾರೆ.

ಚಂದ್ರನ ಮೇಲಿನ ಒಂದ ಕತ್ತಲ ರಾತ್ರಿ ಎಂದರೆ ಭೂಮಿಯ 2 ದಿನ. ಎರಡು ದಿನ ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ಸ್ಲೀಪ್ ಮೂಡ್‌ನಲ್ಲಿ ಇರಲಿದೆ. ಇದೀಗ 4 ದಿನಗಳು ಬಾಕಿ ಉಳಿದಿದೆ. ಈಗಾಗಲೇ ಚಂದ್ರನ ಮೇಲಿನ ತಾಪಮಾನ, ಚಂದ್ರನಲ್ಲಿರುವ ಕುಳಿ, ಸಲ್ಫರ್ ಸೇರಿದಂತೆ ಹಲವು ಧಾತುಗಳ ಕುರಿತು ಮಾಹಿತಿಯನ್ನು ಇಸ್ರೋಗೆ ಕಳುಹಿಸಿದೆ .

ಪ್ರಗ್ಯಾನ್ ರೋವರ್ 100 ಮೀಟರ್ ಸಂಚರಿಸಿ ಚಂದ್ರನ ಮೇಲೆ ಶತಕ ಬಾರಿಸಿದ್ದು, ಚಂದ್ರನ ಮೇಲ್ಮೈ ಸಮೀಪದಲ್ಲೇ ಕಡಿಮೆ ಪ್ರಮಾಣದ ಪ್ಲಾಸ್ಮಾ (ಅಯಾನೀಕೃತ ಅನಿಲ) ವಾತಾವರಣ ಇರುವುದನ್ನು ಪತ್ತೆ ಹಚ್ಚಿದೆ. ಇದರಿಂದ ಚಂದ್ರನಿಂದ ಭೂಮಿಗೆ ಸಂವಹನ ಪ್ರಕ್ರಿಯೆ ಇದರಿಂದ ಮತ್ತಷ್ಟುಸುಲಲಿತ ಆಗಬಹುದು ಎಂದು ಆಶಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!