ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೋನಾ ಮೂರನೇ ಅಲೆ ನಡುವೆಯೇ ಇಂದು ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ.
ಕೋವಿಡ್ ಪರಿಣಾಮದಿಂದ ಹೊರಬರಲು ಭತ್ಯೆಗಳ ಬೂಸ್ಟರ್ ಡೋಸ್ ಬೇಕಿದೆ ಎಂದು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಅಭಿಪ್ರಾಯಪಟ್ಟಿದ್ದಾರೆ.
ಬಜೆಟ್ ಬಗ್ಗೆ ಟ್ವೀಟ್ ಮಾಡಿದ್ದು, ಕೊರೋನಾದಿಂದಾಗಿ ನಮ್ಮ ಆರ್ಥಿಕತೆ ಅಲುಗಾಡಿದೆ. ಇದರಿಂದ ಹೊರಬರಲು ಸಚಿವರು ಭತ್ಯೆಗಳ ಬೂಸ್ಟರ್ ಡೋಸ್ ನೀಡುತ್ತಾರೆ ಎನ್ನುವ ನಿರೀಕ್ಷೆ ಇದೆ. ನಾವು ಖರೀದಿಗೆ ಉತ್ತೇಜನ ನೀಡಬೇಕಿದೆ. ಪ್ರಯಾಣ, ಪ್ರವಾಸೋದ್ಯಮ ಹಾಗೂ ಹೊಟೇಲ್ ಉದ್ಯಮ ಕ್ಷೇತ್ರ ಪುನರುಜ್ಜೀವನಗೊಳಿಸಬೇಕಿದೆ ಎಂದಿದ್ದಾರೆ.
Hope FM gives us a booster dose of incentives to overcome pandemic impact on our economy! We need to spur consumption n revive travel, tourism n hospitality. Common man needs more disposal income to combat inflation.
— Kiran Mazumdar-Shaw (@kiranshaw) January 31, 2022