12ವರ್ಷಗಳ ಬಳಿಕ ʻನೀಲಕುರಿಂಜಿʼ ನರ್ತನ: ನೀಲಿ ವೈಭವ ಕಂಡು ಪುಳಕಿತರಾದ ಪ್ರವಾಸಿಗರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹನ್ನೆರಡು ವರ್ಷಗಳಿಗೊಮ್ಮೆ ಮಾತ್ರ ಅರಳುವ ನೀಲಕುರಿಂಜಿ ಹೂಗಳು ನಮ್ಮ ದೇಶದಲ್ಲಿ ಕರ್ನಾಟಕದ ಜೊತೆಗೆ ತಮಿಳುನಾಡು ಮತ್ತು ಕೇರಳದ ಗುಡ್ಡಗಾಡು ಪ್ರದೇಶಗಳಲ್ಲಿ ಮಾತ್ರ ಕಂಡುಬರುವ ಅಪರೂಪದ ಹೂಗಳು.

ಈ ಹೂಗಳು ಕರ್ನಾಟಕದ ನೀಲಗಿರಿ ಪರ್ವತಗಳಲ್ಲಿ ಅರಳುವುದರಿಂದ ಇವುಗಳಿಗೆ ‘ನೀಲಕುರಿಂಜಿ’, ʻಕುರಿಂಜಿʼ ಹೂವುಗಳೆಂದು ಕರೆಯುತ್ತಾರೆ. ಈ ಹೂ ಅರಳಲು ಹನ್ನೆರಡು ವರ್ಷ ಬೇಕು, ಕೆಲವೊಮ್ಮೆ 16 ವರ್ಷಗಳನ್ನು ತೆಗೆದುಕೊಳ್ಳಬಹುದು. ಈ ಹೂವುಗಳು ಸಮುದ್ರ ಮಟ್ಟದಿಂದ 1,300-2,400 ಮೀಟರ್ ಎತ್ತರದಲ್ಲಿರುವ ಪರ್ವತ ಪ್ರದೇಶಗಳಲ್ಲಿ ಮಾತ್ರ ಅರಳುತ್ತವೆ. ಈ ಬಾರಿ ಕಾಫಿನಾಡು ಚಿಕ್ಕಮಗಳೂರು, ಕೊಡಗು ಜಿಲ್ಲೆ, ನೀಲಗಿರಿ ಬೆಟ್ಟ, ಮುಳ್ಳಯ್ಯನಗಿರಿ ಪ್ರದೇಶಗಳಲ್ಲಿ ಆಕಾಶವೇ ಭೂಮಿಯನ್ನು ಹೊದ್ದಂತೆ ಅರಳಿ ನಿಂತಿವೆ.

ನೀಲಿ ರಂಗಿನಲ್ಲಿ ಅರಳಿದ ಹೂವುಗಳನ್ನು ನೋಡಲು ಸ್ಥಳೀಯರು ಮತ್ತು ಪ್ರವಾಸಿಗರ ದಂಡೇ ಚಿಕ್ಕಮಗಳೂರಿನತ್ತ ತೆರಳುತ್ತಿದೆ. ಈ ಅಮೋಘ ದೃಶ್ಯವನ್ನು ನೋಡಿ ಪ್ರವಾಸಿಗರು ಪುಳಕಿತರಾಗಿದ್ದಾರೆ. ಈ ಸುಂದರ ತಾಣವನ್ನು ಫೋಟೋ, ವೀಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!