89.94 ಮೀ. ಜಾವೆಲಿನ್‌ ಎಸೆದು ಹೊಸ ದಾಖಲೆ ನಿರ್ಮಿಸಿದ ಚಿನ್ನದ ಹುಡುಗ ನೀರಜ್‌ ಚೋಪ್ರಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಪದಕಗಳ ಬೇಟೆಯಾಡುತ್ತಿದ್ದಾರೆ. ಸ್ವೀಡನ್‌ ರಾಜಧಾನಿ ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ  89.94 ಮೀ ಜಾವೆಲಿನ್‌ ಎಸೆಯುವುದರೊಂದಿಗೆ  ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿಯುವ ಮೂಲಕ ಬೆಳ್ಳಿ ಪದಕ ಗಳಿಸಿದ್ದಾರೆ.
23 ವರ್ಷ ವಯಸ್ಸಿನ ನೀರಜ್ ಟೂರ್ನಿಯ ತಮ್ಮ ಪ್ರತಿಸ್ಪರ್ಧಿಗಿಂತ ಕೇವಲ 0.06 ಕಡಿಮೆ ಅಂತರದಲ್ಲಿ ಚಿನ್ನದ ಪದಕವನ್ನು ಕಳೆದುಕೊಂಡರು. ಈ ವರ್ಷದ ಜೂನ್‌ ತಿಂಗಳ ಆರಂಭದಲ್ಲಿ ಫಿನ್‌ಲ್ಯಾಂಡ್‌ನಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ನೀರಜ್ 89.30 ಮೀ. ಜಾವೆಲಿನ್‌ ಎಸೆಯುವ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದರು. ಈ ಮೂಲಕ ಒಂದು ತಿಂಗಳಲ್ಲಿ ಎರಡನೇ ಬಾರಿ ತನ್ನದೇ ದಾಖಲೆಯನ್ನು ಮುರಿದುಹಾಕಿದ್ದಾರೆ.
ವಿಶ್ವ ಚಾಂಪಿಯನ್ ಗ್ರೆನಡಾದ ಆಂಡರ್ಸನ್ ಪೀಟರ್ಸ್ ತನ್ನ ಮೂರನೇ ಪ್ರಯತ್ನದಲ್ಲಿ 90.31 ಮೀಟರ್ ಎಸೆಯುವ ಮೂಲಕ 16 ವರ್ಷಗಳ ಹಳೆಯ ಕೂಟದ ದಾಖಲೆಯನ್ನು ಮುರಿದರು, ಈ ಎಸೆತ ಅವರಿಗೆ ಚಿನ್ನದ ಪದಕವನ್ನು ಗಳಿಸಿಕೊಡಲು ಸಾಕಾಗಿತ್ತು. ವಿಶ್ವದ 4ನೇ ಶ್ರೇಯಾಂಕದ ಜರ್ಮನಿಯ ಜೂಲಿಯನ್ ವೆಬರ್ 89.08 ಮೀ ಎಸೆದು ಮೂರನೇ ಸ್ಥಾನ ಪಡೆದರು.
ʼನಾನು ಈಗ 90 ಮೀ. ಸಮೀಪದಲ್ಲಿದ್ದೇನೆ ಮತ್ತು ಈ ವರ್ಷ ನಾನು ಅದನ್ನು ಎಸೆಯಬಲ್ಲೆ, ”ಎಂದು ಚೋಪ್ರಾ ವಿಶ್ವಾಸ ಹಂಚಿಕೊಂಡಿದ್ದಾರೆ.

“ಜುಲೈನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ಗೆ  ʼಸ್ಟಾಕ್‌ಹೋಮ್ ಡೈಮಂಡ್ ಲೀಗ್ʼ ಚೋಪ್ರಾಗೆ ಕೊನೆಯ ಸಿದ್ಧತೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!