ಡೈಮಂಡ್ ಲೀಗ್‌ನಲ್ಲಿ ಎರಡನೇ ಸ್ಥಾನ ಪಡೆದ ನೀರಜ್ ಚೋಪ್ರಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ಡೈಮಂಡ್ ಲೀಗ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.

ಗುರುವಾರ ಸ್ವಿಜ್ಜರ್‌ಲ್ಯಾಂಡ್‌ನ ಲೌಸನ್ನೆ ಡೈಮಂಡ್ ಲೀಗ್ 2024 ರಲ್ಲಿ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ 89.49ಮೀ. ಎಸೆಯುವ ಮೂಲಕ ಸೀಸನ್‌ನ ಅತ್ಯುತ್ತಮ ಎಸೆತವನ್ನು ಎಸೆದಿದ್ದಾರೆ.

ಗ್ರೇನಡಾದ ಆಂಡರ್ಸನ್ ಪೀಟರ್ಸ್ (Anderson Peters) 90.61ಮೀ., ನೀರಜ್ ಚೋಪ್ರಾ 89.49ಮೀ., ಹಾಗೂ ಜರ್ಮನಿಯ ಜೂಲಿಯಸ್ ವೇಬರ್ 87.08ಮೀ. ಎಸೆಯುವ ಮೂಲಕ ಅನುಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದುಕೊಂಡರು.

ಚೋಪ್ರಾ ಮೊದಲ ಪ್ರಯತ್ನದಲ್ಲಿ 82.10ಮೀ. ದೂರ ಎಸೆದರು. ತಮ್ಮ ಮೊದಲ ನಾಲ್ಕು ಪ್ರಯತ್ನದವರೆಗೂ ಚೋಪ್ರಾ ಮೊದಲ ಮೂರು ಸ್ಥಾನಗಳಿಂದ ಹೊರಗುಳಿದ್ದರು. ಪೀಟರ್ಸ್ ತಮ್ಮ ಕೊನೆಯ ಪ್ರಯತ್ನದಲ್ಲಿ 90.61 ಮೀ ದೂರ ಎಸೆಯುವ ಮೂಲಕ ಮೊದಲ ಸ್ಥಾನ ಪಡೆದರು.

ಚೋಪ್ರಾ ತನ್ನ ಐದನೇ ಪ್ರಯತ್ನದಲ್ಲಿ 85.58ಮೀ ಎಸೆಯುವ ಮೂಲಕ ಮೂರನೇ ಸ್ಥಾನಕ್ಕೆ ಮರಳಿದರು. ನಂತರ ತಮ್ಮ 6ನೇ ಹಾಗೂ ಕೊನೆಯ ಪ್ರಯತ್ನದಲ್ಲಿ 89.49ಮೀ ಎಸೆಯುವ ಮೂಲಕ ಸೀಸನ್‌ನ ಎರಡನೇ ಸ್ಥಾನವನ್ನು ಪಡೆದುಕೊಂಡರು ಮತ್ತು ಸೀಸನ್‌ನ ಅತ್ಯುತ್ತಮ ಎಸೆತವನ್ನು ನಿರ್ಮಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!