ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶ ಸರ್ಕಾರ ತನ್ನ 13 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಶಾಕ್ ನೀಡಿದ್ದು,ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಸರ್ಕಾರ ಎಲ್ಲಾ ಸರ್ಕಾರಿ ಉದ್ಯೋಗಿಗಳು ತಮ್ಮ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಮಾನವ ಸಂಪದಾ ಪೋರ್ಟಲ್‌ನಲ್ಲಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಒಂದು ವೇಳೆ ಘೋಷಿಸಿಲ್ಲವಾದರೆ ಆಗಸ್ಟ್ ತಿಂಗಳ ವೇತನ ಪಾವತಿಯಾಗುವುದು ಅನುಮಾನ.
ಉದ್ಯೋಗಿಗಳು ಆಗಸ್ಟ್ 31 ರೊಳಗೆ ತಮ್ಮ ಆಸ್ತಿಯ ವಿವರವನ್ನು ಘೋಷಿಸಬೇಕು. ಒಂದು ವೇಳೆ ಘೋಷಿಸದೇ ತಿಂಗಳ ಸಂಬಳವನ್ನು ಪಾವತಿಸಲಾಗುವುದಿಲ್ಲ ಜೊತೆಗೆ ಬಡ್ತಿಯ ಮೇಲೂ ಇದು ಗಂಭೀರ ಪರಿಣಾಮ ಬೀರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸರ್ಕಾರ ಈಗ ಹಿಂದೆ ಕಳೆದ ವರ್ಷದ ಡಿಸೆಂಬರ್ 31ಕ್ಕೆ ಗಡುವು ನೀಡಿತ್ತು. ನಂತರ ಹಲವು ಬಾರಿ ವಿಸ್ತರಣೆ ಮಾಡಿ ಈಗ ಆ.31 ರಂದು ಕೊನೆಯದಾಗಿ ವಿಸ್ತರಿಸಿದೆ. ರಾಜ್ಯದಲ್ಲಿನ 17,88,429 ಸರ್ಕಾರಿ ನೌಕರರ ಪೈಕಿ 26% ಉದ್ಯೋಗಿಗಳು ಮಾತ್ರ ವೆಬ್‌ಸೈಟ್‌ನಲ್ಲಿ ವಿವರ ಸಲ್ಲಿಸಿದ್ದು ಇನ್ನೂ 13 ಲಕ್ಷಕ್ಕೂ ಹೆಚ್ಚು ನೌಕರರು ತಮ್ಮ ಆಸ್ತಿಯನ್ನು ಬಹಿರಂಗಪಡಿಸಬೇಕಿದೆ.
ವರದಿಗಳ ಪ್ರಕಾರ ಹೊಸ ಗಡುವಿನ ಮೊದಲು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸುವವರಿಗೆ ಮಾತ್ರ ಈ ತಿಂಗಳ ವೇತನವನ್ನು ಪಾವತಿಸಲಾಗುತ್ತದೆ. ಈ ನಿಯಮವು ಎಲ್ಲಾ ವರ್ಗದ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ಅನ್ವಯಿಸುತ್ತದೆ .