NEET ರದ್ದುಗೊಳಿಸಲಾಗುವುದು, ವಿದ್ಯಾರ್ಥಿಗಳು ಪ್ರಾಣ ಕಳೆದುಕೊಳ್ಳಬೇಡಿ: ಸಿಎಂ ಎಂ. ಕೆ. ಸ್ಟಾಲಿನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೈದ್ಯಕೀಯ ಆಕಾಂಕ್ಷಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ತಮಿಳುನಾಡು (Tamil Nadu) ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (MK Stalin) ಅವರು

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಆಕಾಂಕ್ಷಿಗಳು ಯಾವುದೇ ನಿರ್ಧಾರ ಕೈಗೊಳ್ಳದೆ ಆತ್ಮಸ್ಥೈರ್ಯದಿಂದ ಜೀವನವನ್ನು ಎದುರಿಸುವಂತೆ ತಮಿಳುನಾಡು (Tamil Nadu) ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸೋಮವಾರ ಮನವಿ ಮಾಡಿದ್ದಾರೆ.

ವಿದ್ಯಾರ್ಥಿ ಜಗದೀಶ್ವರನ್ ಮತ್ತು ಅವರ ತಂದೆ ಸೆಲ್ವಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ನಿಧನಕ್ಕೆ ನಾನು ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ನೀಟ್ ವಿಷಯದಲ್ಲಿ ಅವರ ಸಾವು ಕೊನೆಯ ಪ್ರಕರಣ ಆಗಿರಲಿ ಎಂದು ಸ್ಟಾಲಿನ್ ಹೇಳಿದ್ದಾರೆ.

ಕೆಲವೇ ತಿಂಗಳುಗಳಲ್ಲಿ ರಾಜಕೀಯ ಬದಲಾವಣೆಯಾದಾಗ NEET ಅಡೆತಡೆಗಳು ಕಮ್ಮಿಯಾಗುತ್ತವೆ ಎಂದು ಸ್ಟಾಲಿನ್ ಹೇಳಿದ್ದಾರೆ. ಆಗ,‘ನಾನು ಸಹಿ ಹಾಕುವುದಿಲ್ಲ’ ಎಂದು ಹೇಳುವವರೆಲ್ಲ ಕಾಣೆಯಾಗುತ್ತಾರೆ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ನೀಟ್ ವಿರೋಧಿ ಮಸೂದೆ ವಿರುದ್ಧ ಮಾಡಿದ ಹೇಳಿಕೆಯನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಹೇಳಿದರು.

ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ನಗರದ ಕ್ರೋಮ್‌ಪೇಟೆಯ ವಿದ್ಯಾರ್ಥಿ, ವೈದ್ಯಕೀಯ ಆಕಾಂಕ್ಷಿ ಜಗದೀಶ್ವರನ್ ಅವರ ಇತ್ತೀಚಿನ ನಿಧನದ ಬಗ್ಗೆ ಆಘಾತ ವ್ಯಕ್ತಪಡಿಸಿದ ಮುಖ್ಯಮಂತ್ರಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಜಗದೀಶ್ವರನ್ ಅವರ ತಂದೆ ಸೆಲ್ವಶೇಖರ್ ಸಹ ಮರುದಿನ ಆತ್ಮಹತ್ಯೆ ಮಾಡಿಕೊಂಡರು, ಅವರ ಕುಟುಂಬ ಮತ್ತು ಸ್ನೇಹಿತರಿಗೆ ಹೇಗೆ ಸಾಂತ್ವನ ಹೇಳಬೇಕೆಂದು ನಾನು ಗೊಂದಲದಲ್ಲಿದ್ದೇನೆ ಎಂದು ಹೇಳಿದರು.

ಚೆನ್ನಾಗಿ ಓದುತ್ತಿದ್ದ ಮಗನನ್ನು ವೈದ್ಯನನ್ನಾಗಿ ನೋಡಬೇಕೆಂದು ಅವನ ಹೆತ್ತವರು ಬಯಸಿದ್ದರು. ಆದರೆ ಜಗದೀಶ್ವರನ್ ನೀಟ್ ಪರೀಕ್ಷೆಯ ಬಲಿಪೀಠದ ಮೇಲೆ ಬಲಿಯಾದವರ ಪಟ್ಟಿಗೆ ಸೇರಿಕೊಂಡಿದ್ದಾರೆ, ಇದು ಅತ್ಯಂತ ಭಯಾನಕ ಘಟನೆಯಾಗಿದೆ ಎಂದಿದ್ದಾರೆ.

ಯಾವುದೇ ಸಂದರ್ಭದಲ್ಲೂ ಯಾವುದೇ ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನು ತೆಗೆಯುವ ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂದು ಮನವಿ ಮಾಡುತ್ತೇನೆ. ನಿಮ್ಮ ಬೆಳವಣಿಗೆಗೆ ಅಡ್ಡಿಯಾಗಿರುವ NEET ಅನ್ನು ರದ್ದುಗೊಳಿಸಲಾಗುವುದು. ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಕಾನೂನು ಉಪಕ್ರಮದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.
ನೀಟ್ ವಿನಾಯಿತಿಗೆ ಒತ್ತಾಯಿಸುವ ವಿಧಾನಸಭೆ ನಿರ್ಣಯ ಕೈಗೊಂಡಿದ್ದು, ರಾಜ್ಯಪಾಲರು ಮೊದಲ ನಿರ್ಣಯವನ್ನು ಹಿಂದಿರುಗಿಸಿದ್ದು, ಎರಡನೆಯದನ್ನು ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಿದರು. ರಾಜ್ಯಪಾಲ ರವಿ ಅವರು ಮಸೂದೆಯನ್ನು ರದ್ದುಪಡಿಸಲು ಬಯಸುತ್ತಿರುವಂತೆ ಕಂಡುಬರುತ್ತಿದೆ. ನೀಟ್ ಪರೀಕ್ಷೆ ದುಬಾರಿಯಾಗಿದ್ದು, ಶ್ರೀಮಂತರು ಮಾತ್ರ ಅದನ್ನು ಭರಿಸಬಹುದು ಎಂದು ಮುಖ್ಯಮಂತ್ರಿ ಹೇಳಿದರು.

ಹಣ ಖರ್ಚು ಮಾಡಿ ಓದಲು ಸಾಧ್ಯವಾಗದವರು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ . ಕೇವಲ ನೀಟ್‌ನಲ್ಲಿ ತೇರ್ಗಡೆಯಾದವರು ಹಣವಿದ್ದರೆ ವೈದ್ಯಕೀಯ ಕಾಲೇಜಿಗೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ ಮತ್ತು ವೈದ್ಯಕೀಯ ಶಿಕ್ಷಣ ಹಣ ಉಳ್ಳವರಿಗೆ ಮಾತ್ರ ಎಂದು ಹೇಳಿದರು.

‘ನೀಟ್‌ನ ಬಲಿಪೀಠದ ಮೇಲೆ ಅವರ ಸಾವು ಅಂತಿಮವಾಗಲಿ. ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ಕಾದಿದೆ. ಆತ್ಮಸ್ಥೈರ್ಯದಿಂದಿರಿ. ಬದುಕಿ ಮತ್ತು ಇತರರನ್ನು ಬದುಕಲು ಬಿಡಿ. ಯಾವುದೇ ಆತ್ಮಹತ್ಯಾ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಡಿ’ ಎಂದು ತಮಿಳುನಾಡು ಸಿಎಂ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!