ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ವೇಗಿ ಸ್ಟೀವನ್ ಫಿನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಕದಿನ ವಿಶ್ವಕಪ್ ಗೆ ಎಲ್ಲಾ ತಂಡಗಳು ಸಜ್ಜಾಗುತ್ತಿದ್ದು, ಇದರ ನಡುವೆ ಇಂಗ್ಲೆಂಡ್ ವೇಗಿ ಸ್ಟೀವನ್ ಫಿನ್ (Steven Finn) ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.

ಹೀಗೆ ದಿಢೀರ್ ನಿವೃತ್ತಿ ಘೋಷಿಸಲು ಮುಖ್ಯ ಕಾರಣ ಮೊಣಕಾಲು ಗಾಯದ ಸಮಸ್ಯೆ ಎಂದು ತಿಳಿಸಿದ್ದಾರೆ.

34 ವರ್ಷದ ಸ್ಟೀವನ್ ಫಿನ್ ಮೊಣಕಾಲು ಗಾಯದ ಸಮಸ್ಯೆಯ ಕಾರಣ ಕಳೆದೊಂದು ವರ್ಷದಿಂದ ಮೈದಾನಕ್ಕಿಳಿದಿರಲಿಲ್ಲ. ಇದೀಗ ಸಂಪೂರ್ಣ ಚೇತರಿಸಿಕೊಂಡು ಮೈದಾನಕ್ಕೆ ಮರಳುವ ವಿಶ್ವಾಸವನ್ನು ಸಹ ಹೊಂದಿಲ್ಲ. ಹೀಗಾಗಿ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ ಎಂದು ಫಿನ್ ತಿಳಿಸಿದ್ದಾರೆ.

2010 ರಲ್ಲಿ ಇಂಗ್ಲೆಂಡ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಸ್ಟೀವನ್ ಫಿನ್ ಕರಾರುವಾಕ್ ಬೌಲಿಂಗ್ ಮೂಲಕ ಮಿಂಚಿದ್ದರು. ಅಲ್ಲದೆ ಮೂರು ಬಾರಿ ಆ್ಯಶಸ್ ಸರಣಿ ಗೆದ್ದ ಇಂಗ್ಲೆಂಡ್ ತಂಡದ ಭಾಗವಾಗಿದ್ದರು.

ಇಂಗ್ಲೆಂಡ್ ಪರ 36 ಟೆಸ್ಟ್ ಪಂದ್ಯಗಳನ್ನಾಡಿರುವ ಫಿನ್ ಒಟ್ಟು 125 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 69 ಏಕದಿನ ಪಂದ್ಯಗಳಿಂದ 102 ವಿಕೆಟ್ ಪಡೆದಿದ್ದಾರೆ. ಇದಲ್ಲದೆ 21 ಟಿ20 ಪಂದ್ಯಗಳಿಂದ 27 ವಿಕೆಟ್ ಉರುಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!