KNOW WHY| ಇಂತಹ ಟ್ಯಾಟೂಗಳನ್ನು ಅಪ್ಪಿತಪ್ಪಿಯೂ ಹಾಕಿಸಿಕೊಳ್ಳಬಾರದೇಕೆ?

ಟ್ಯಾಟೂ ಹಾಕಿಸೋದು ಈಗಿನ ಕಾಲದಲ್ಲಿ ಫ್ಯಾಷನ್, ಒಬ್ಬರನ್ನು ನೋಡಿ ಮತ್ತೊಬ್ಬರು ಟ್ಯಾಟೂ ಹಾಕಿಸ್ತಾರೆ. ಯಾವುದ್ಯಾವುದೋ ವಿಷಯಗಳಿಂದ ಸ್ಪೂರ್ಥಿ ಪಡೆದು ಟ್ಯಾಟೂ ಹಾಕಿಸ್ತಾರೆ. ಆದರೆ ಎಲ್ಲಾ ಟ್ಯಾಟೂಗಳು ಲಕ್ಕಿ ಅಲ್ಲ, ಕೆಲವು ಟ್ಯಾಟುಗಳು ನೆಗೆಟಿವಿಟಿ ಹರಡುತ್ತದೆ. ಇಂಥ ಟ್ಯಾಟೂಗಳನ್ನು ಹಾಕೋ ಮುನ್ನ ಒಮ್ಮೆ ಯೋಚಿಸಿ..

ಒಡೆದ ಕನ್ನಡಿ
ಒಡೆದ ಕನ್ನಡಿಯಲ್ಲಿ ಮುಖ ನೋಡಿಕೊಂಡರೆ ಏಳು ವರ್ಷ ಬ್ಯಾಡ್ ಲಕ್ ಎಂದು ನಂಬಲಾಗುತ್ತದೆ. ಭಾರತ ಹಾಗೂ ರಶ್ಯಾದಲ್ಲಿ ಈ ನಂಬಿಕೆ ಇದೆ. ಆದರೆ ಎಲ್ಲರೂ ಈ ವಿಷಯದಲ್ಲಿ ನಂಬಿಕೆ ಇಡೋದಿಲ್ಲ. ಮನೆಯಲ್ಲಿ ಇದ್ದ ಕನ್ನಡಿ ಕೈ ತಾಗಿ ಬಿದ್ದು ಒಡೆದು ಹೋದರೆ ಅದನ್ನು ತೆಗೆಯುವಾಗಾದರೂ ಮುಖ ಕಾಣಿಸುತ್ತದೆ ಅಲ್ವಾ? ಇಲ್ಲಿ ಎಲ್ಲವೂ ಅವರವರ ನಂಬಿಕೆ ಆಧರಿಸಿದ್ದು.

ಕಪ್ಪು ಬೆಕ್ಕು
ಕಪ್ಪು ಬೆಕ್ಕನ್ನು ಈಗಲೂ ಅಶುಭ ಎಂದು ಭಾವಿಸುವ ಸಾಕಷ್ಟು ಮಂದಿಯಿದ್ದಾರೆ. ಮಾಟ, ಮಂತ್ರ ಈ ರೀತಿ ವಿಷಯಗಳಲ್ಲಿ ಕಪ್ಪು ಬೆಕ್ಕನ್ನು ಕಾಣುವುದರಿಂದ  ಟ್ಯಾಟೂ ಹಾಕಿಸುವುದು ಅಶುಭ ಎನ್ನಲಾಗುತ್ತದೆ. ಆದರೆ ಮನೆಯಲ್ಲಿ ಕಪ್ಪು ಬೆಕ್ಕನ್ನು ಸಾಕುವವರೂ ಇದ್ದಾರೆ ಟ್ಯಾಟೂ ಹಾಕಿಸಿಕೊಳ್ಳುವವರೂ ಇದ್ದಾರೆ.

ದುಃಖದ ಮುಖ
ದುಃಖದ ಮುಖಗಳು ನಕಾರಾತ್ಮಕ ಭಾವನೆಗಳನ್ನು ಉಂಟುಮಾಡುತ್ತವೆ. ಜೀವನದಲ್ಲಿ ಭಾವನೆಗಳು ಬಹಳ ಮುಖ್ಯ. ನಾವು ಅವುಗಳನ್ನು ವ್ಯಕ್ತಪಡಿಸುವ ರೀತಿ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ದುಃಖವನ್ನು ವ್ಯಕ್ತಪಡಿಸುವ ಟ್ಯಾಟೂ ವಿನ್ಯಾಸಗಳನ್ನು ದೇಹದ ಮೇಲೆ ಹಾಕಿಸೋದು ಒಳ್ಳೆಯದಲ್ಲ.

ತಲೆಕೆಳಗಾದ ಕುದುರೆ
ರಿವರ್ಸ್ ಕುದುರೆ ಟ್ಯಾಟೂವು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ತಲೆಕೆಳಗಾದ ಕುದುರೆ ಗೊರಸು ವಿನ್ಯಾಸವು ಜೀವನದಿಂದ ಸಕಾರಾತ್ಮಕತೆಯನ್ನು ಬರಿದುಮಾಡುವ ಅಶುಭ ಸಂಕೇತವಾಗಿದೆ. ಈ ವಿನ್ಯಾಸವನ್ನು ದೇಹದ ಮೇಲೆ ಹಚ್ಚಿದರೆ ಅದು ದುರಾದೃಷ್ಟವನ್ನು ಆಹ್ವಾನಿಸುತ್ತದೆ ಎಂದು ಹೇಳಲಾಗುತ್ತದೆ.

ಮುರಿದ ಗಡಿಯಾರ
ಮುರಿದ ಗಡಿಯಾರವು ದುರದೃಷ್ಟದ ಸಂಕೇತವಾಗಿದೆ. ವಾಸ್ತು ಪ್ರಕಾರ ಮುರಿದ ಗಡಿಯಾರವು ನಿಂತ ಸಮಯದ ಸಂಕೇತವಾಗಿದೆ. ಇಂತಹದ್ದನ್ನು ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡರೆ ಜೀವನದಲ್ಲಿ ಪ್ರಗತಿ ಕುಂಠಿತವಾಗುತ್ತದೆ. ಸಮಯವು ಗ್ರಹಗಳ ಚಲನೆಗೆ ಅನುಗುಣವಾಗಿ ಚಲಿಸುತ್ತದೆ. ಆದ್ದರಿಂದ, ಮುರಿದ ಗಡಿಯಾರವನ್ನು ಹಚ್ಚೆ ಕೂಡ ಒಳ್ಳೆಯದಲ್ಲ.

ಛತ್ರಿ ಟ್ಯಾಟೂ
ಮನೆಯೊಳಗೆ ಛತ್ರಿಯನ್ನು ತೆರೆಯಬಾರದು, ಇದರಿಂದ ಒಳ್ಳೆಯದಾಗುವುದಿಲ್ಲ ಎನ್ನುವುದು ಅನೇಕರ ನಂಬಿಕೆ. ಇಜಿಪ್ಶಿಯನ್ ಕಾಲದಲ್ಲಿ ನವಿಲಿನ ಗರಿಗಳನ್ನು ಬಳಸಿ ಛತ್ರಿ ಮಾಡಿಕೊಂಡು ಬಿಸಿಲಿನಿಂದ ರಕ್ಷಣೆ ಪಡೆಯಲಾಗುತ್ತಿತ್ತಂತೆ. ಪ್ರಾಣಿಹಿಂಸೆ ಮಾಡಿ ಛತ್ರಿ ಮಾಡಿಕೊಂಡಿದ್ದು ಸೂರ್ಯದೇವನಿಗೆ ಇಷ್ಟವಿರಲಿಲ್ಲವಂತೆ, ಛತ್ರಿ ಎಂದರೆ ಕೆಟ್ಟ ವಾತಾವರಣಗಳಿಗೆ ಬಳಸುವ ಸಾಧನ, ಹಾಗಾಗಿ ಜೀವನದ ವಾತಾವರಣವೂ ಕೆಟ್ಟದಾಗುತ್ತದೆ ಎನ್ನುವ ನಂಬಿಕೆ ಅನೇಕರಿಗಿದೆ.

ಏಣಿ ಟ್ಯಾಟು
ಏಣಿಯ ಟ್ಯಾಟೂ ಹಾಕಿಸಿಕೊಳ್ಳೋರ ಸಂಖ್ಯೆ ವಿರಳ, ಆದರೆ ಏಣಿಯ ಕೆಳಗೆ ಓಡಾಡಿದರೆ ಕೆಟ್ಟ ಸಮಯ ಬರುತ್ತದೆ ಎಂದು ನಂಬಲಾಗುತ್ತಿತ್ತು. ಇಂಗ್ಲೆಂಡ್‌ನಲ್ಲಿ ಕ್ರಿಮಿನಲ್‌ಗಳನ್ನು ಏಣಿಗಳ ಅಡಿಯಲ್ಲಿ ಓಡಾಡುವಂತೆ ಹೇಳಲಾಗುತ್ತಿತ್ತಂತೆ.

ಖಾಲಿ ಚೇರ್
ಖಾಲಿ ಕುರ್ಚಿ ಎಲ್ಲೇ ಅಲ್ಲಾಡಿದ್ರೂ ಗಾಳಿ ಬಂದು ಅಲ್ಲಾಡ್ತಿದೆ ಎಂದು ಎಷ್ಟು ಮಂದಿ ಭಾವಿಸ್ತಾರೆ, ಯಾರದ್ದೋ ಆತ್ಮ ಕೂತು ತೂಗುತ್ತಿದೆ ಎಂದೇ ಹೇಳಲಾಗುತ್ತದೆ. ನಮ್ಮ ಸಿನಿಮಾಗಳಲ್ಲಿಯೂ ದೆವ್ವ ಬಂದಿದೆ ಎಂದು ತೋರಿಸೋದೇ ಹೀಗಲ್ವಾ? ಇದು ನೆಗೆಟಿವ್ ಎನರ್ಜಿ ಸಂಕೇತ, ನೆಗೆಟಿವ್ ಎನರ್ಜಿ ಬಿಂಬಿಸುವ ಟ್ಯಾಟೂ ಯಾಕೆ ಹೇಳಿ?

ಟ್ಯಾಟೂಗಳ ಆಯ್ಕೆ ಅವರವರಿಗೆ ಬಿಟ್ಟದ್ದು, ಅಜ್ಜ ಕೂರುತ್ತಿದ್ದ ಚೇರ್ ಖಾಲಿಯಾಗಿದೆ ಎಂದು ಅಜ್ಜನ ನೆನಪಿಗಾಗಿ ಖಾಲಿ ಕುರ್ಚಿಯನ್ನೇ ಟ್ಯಾಟೂ ಹಾಕಿಸಿಕೊಳ್ಳುವವರಿದ್ದಾರೆ, ಬಿಸಿಲು ಮಳೆ ಏನೇ ಬರಲಿ ಛತ್ರಿ ನಮ್ಮನ್ನು ರಕ್ಷಿಸುತ್ತದೆ ಎಂದು ಇಷ್ಟಪಟ್ಟು ಛತ್ರಿ ಟ್ಯಾಟೂ ಹಾಕಿಸಬಹುದು. ಪ್ರತಿ ಟ್ಯಾಟೂಗೂ ಅರ್ಥ ಕೊಡುವವರು ನೀವೇ ಅಲ್ವಾ?

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!