ಸಿಟ್ಟಲ್ಲಿ ನೇಹಾ ಕೊಲೆ ಮಾಡಿದ್ದಲ್ಲ, ಇದು ಪ್ರೀ ಪ್ಲಾನ್ಡ್‌ ಮರ್ಡರ್‌, ಪೊಲೀಸರೆದುರು ಸತ್ಯ ಬಿಚ್ಚಿಟ್ಟ ಫಯಾಜ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಡೀ ರಾಜ್ಯವೇ ಬೆಚ್ಚಿಬೀಳುವಂತೆ ಮಾಡಿದ್ದ ಯುವತಿ ನೇಹಾ ಹಿರೇಮಠ ಮರ್ಡರ್‌ ಬಗ್ಗೆ ಆರೋಪಿ ಫಯಾಜ್‌ ಸತ್ಯವನ್ನು ಬಿಚ್ಚಿಟ್ಟಿದ್ದಾನೆ. ಮರ್ಡರ್‌ಗೆ ಯಾವ ರೀತಿ ಪ್ಲಾನ್ ಮಾಡಿದ್ದೆ, ಓಡಿಹೋಗಲು ಹೇಗೆ ತಯಾರಾಗಿದ್ದೆ ಎನ್ನುವ ಬಗ್ಗೆ ಫಯಾಜ್‌ ಸತ್ಯ ಹೇಳಿದ್ದಾನೆ.

ಏಪ್ರಿಲ್ 18ರಂದು ಫಯಾಜ್, ನೇಹಾ ಹಿರೇಮಠ್‌ ಅನ್ನು ಭಯಾನಕವಾಗಿ ಹತ್ಯೆ ಮಾಡಿದ್ದ. ಆದರೆ ನೇಹಾ ಹತ್ಯೆಗೆ 5 ದಿನಗಳ ಮೊದಲೇ ಚಾಕು ಖರೀದಿ ಮಾಡಿದ್ದ. ಧಾರವಾಡದಲ್ಲಿ ನೇಹಾ ಕೊಲೆ ಮಾಡೋ ಉದ್ದೇಶದಿಂದ ಚಾಕು ಖರೀದಿಸಿ ಬ್ಯಾಗ್​ನಲ್ಲಿ ಇಟ್ಟುಕೊಂಡು ಓಡಾಡಿದ್ದ. ಫಯಾಜ್‌ ನೇಹಾಳನ್ನು ಪ್ರೀತಿಸಿದ್ದ. ನನಗೆ ಸಿಗದ ಹುಡುಗಿ ಯಾರಿಗೂ ಸಿಗೋದು ಬೇಡ ಎನ್ನೋ ಮನಸ್ಥಿತಿ ಆತನದ್ದಾಗಿತ್ತು ಎನ್ನಲಾಗಿದೆ.

ಮೊದಲೇ ಆಲೋಚಿಸಿದಂತೆ ಫಯಾಜ್‌ ಧಾರವಾಡದ ಪರೀಕ್ಷಾ ಕೇಂದ್ರದ ಎದುರು ಎರಡೂವರೆ ಗಂಟೆಗಳು ಕಾದು ಕುಳಿತಿದ್ದ. ತನ್ನ ತಾಯಿಯ ಸ್ಕೂಟಿ ತೆಗೆದುಕೊಂಡು ಬಂದಿದ್ದ.ನೇಹಾ ಕೊಲೆಗೆ ಮೊದಲು ಫಯಾಜ್‌ ಸ್ಕೂಟಿಯ ಹ್ಯಾಂಡಲ್ ಲಾಕ್ ಮಾಡದೇ ಬಿಟ್ಟಿದ್ದ. ಕೊಲೆ ನಂತರ ಓಡೋಕೆ ಸುಲಭವಾಗಲಿ ಎನ್ನೋದು ಫಯಾಜ್‌ ತಲೆಯಲ್ಲಿತ್ತು. ಯಾವ ರಸ್ತೆಗೆ ಹೋಗಬೇಕೋ ಆ ರಸ್ತೆ ಕಡೆಯೇ ಮುಖ ಮಾಡಿ ಸ್ಕೂಟಿ ರೆಡಿ ಇಟ್ಟಿದ್ದ. ಆದರೆ ಕೊಲೆ ನಂತರ ತನ್ನ ಪ್ಲಾನ್‌ನಂತೆ ಸ್ಕೂಟಿ ಕಡೆ ಬರಲು ಸಾಧ್ಯವಾಗದೇ ಇದ್ದಾಗ ಕಾಲೇಜು ಮುಖ್ಯದ್ವಾರದಿಂದ ಓಡಿಹೋಗಿದ್ದಾನೆ. ನೇಹಾ ಹಿರೇಮಠ್ ಅನ್ನು ಬರ್ಬರವಾಗಿ ಹತ್ಯೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!