ನೇಹಾ ಮರ್ಡರ್‌ | ಆರೋಪಿ ಫಯಾಜ್‌ ಊರಿನಲ್ಲಿ ಆತಂಕದ ವಾತಾವರಣ, ಪೋಷಕರು ಎಸ್ಕೇಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಪುತ್ರಿ ನೇಹಾ ಕೊಲೆ ಪ್ರಕರಣ ಸಂಬಂಧ ಪೊಲೀಸರು ಆರೋಪಿ ಫಯಾಜ್​ನನ್ನು ಬಂಧಿಸಿದ್ದಾರೆ. ಇತ್ತ ಫಯಾಜ್‌ ಪೋಷಕರು ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ.

ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ನಿವಾಸಿಯಾದ ಫಯಾಜ್‌ ಪೋಷಕರ ಜೊತೆಯೇ ಇದ್ದ.  ಫಯಾಜ್ ತಂದೆ ಬಾಬಾ ಸಾಹೇಬ್, ತಾಯಿ ಮುಮತಾಜ್ ಇಬ್ಬರು ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ.  ಕಾಲೇಜಿನಲ್ಲಿ ಫೇಲ್ ಆಗಿದ್ದರಿಂದ ಫಯಾಜ್ ಆರು ತಿಂಗಳಿನಿಂದ ಮನೆಯಲ್ಲಿಯೇ ಇದ್ದ. ನಿನ್ನೆ ನೇಹಾ ಹಿರೇಮಠ್ ಅವರನ್ನು ಕೊಲೆ ಮಾಡುವುದಕ್ಕಾಗಿಯೇ ಹುಬ್ಬಳ್ಳಿಗೆ ಹೋಗಿದ್ದ ಎನ್ನಲಾಗುತ್ತಿದೆ. ಹತ್ಯೆಯಾದ ನೇಹಾ ತಂದೆ ಹಿರೇಮಠ್ ನೀಡಿರುವ ಮಾಹಿತಿ ಪ್ರಕಾರ, ಆರೋಪಿ ಫಯಾಜ್ ಬಿಸಿಎನಲ್ಲಿ ನೇಹಾಗೆ ಹಳೆಯ ಸಹಪಾಠಿ ಎನ್ನಲಾಗಿದೆ.

ಪ್ರಕರಣ ಬೆನ್ನಲ್ಲೇ ಆರೋಪಿ ಸ್ವಗ್ರಾಮ ಮುನವಳ್ಳಿಯಲ್ಲಿ ಆತಂಕ ಮನೆಮಾಡಿದೆ. ಹಿಂದೂ ಪರ ಸಂಘಟನೆಗಳು ಗ್ರಾಮವನ್ನು ಬಂದ್ ಮಾಡಿವೆ. ಸವದತ್ತಿ ತಾಲೂಕಿನ ಮುನವಳ್ಳಿಯ ಆರೋಪಿ ಮನೆಗೆ ಪೋಲಿಸ್ ಭದ್ರತೆ ನೀಡಲಾಗಿದೆ. ಫಯಾಜ್ಅಕ್ಕಪಕ್ಕದ ಮನೆಯವರೂ ಸಹ ತಾತ್ಕಾಲಿಕವಾಗಿ ಮನೆ ಖಾಲಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!