ವೈಯಕ್ತಿಕ ಕಾರಣಕ್ಕೆ ಕೊಲೆ ಮಾಡಿಲ್ಲ, ಸಿಎಂ ಹೇಳಿಕೆಯಿಂದ ತನಿಖೆ ದಿಕ್ಕು ತಪ್ಪುತ್ತೆ ಎಂದ ನೇಹಾ ತಂದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾಂಗ್ರೆಸ್‌ ಸದಸ್ಯ ನಿರಂಜನ್‌ ಹಿರೇಮಠ ಪುತ್ರಿ ನೇಹಾ ಹಿರೇಮಠ ಕೊಲೆ ಪ್ರಕರಣ ರಾಜ್ಯದಲ್ಲೇ ಸಂಚಲನ ಮೂಡಿಸಿದೆ.

ಸಿಎಂ ಸಿದ್ದರಾಮಯ್ಯ ವೈಯಕ್ತಿಕ ಕಾರಣದಿಂದ ಕೊಲೆ ಆಗಿದೆ ಎಂದು ಹೇಳಿಕೆ ನೀಡಿದ್ದಾರೆ, ಇತ್ತ ಜಿ ಪರಮೇಶ್ವರ ಇದು ಪ್ರೇಮ ಪ್ರಕರಣದಿಂದಾದ ಕೊಲೆ ಎಂದು ಹೇಳಿದ್ದಾರೆ.

ಈ ಬಗ್ಗೆ ನಿರಂಜನ್‌ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಯಾರು? ನನ್ನ ಮಗಳು ಎಂಥವಳು ಎನ್ನುವ ಯಾವುದೇ ಮಾಹಿತಿ ಇಲ್ಲದೆ ವೈಯಕ್ತಿಕ ಕಾರಣದಿಂದ ಆದ ಕೊಲೆ ಎಂದು ಹೇಗೆ ಹೇಳ್ತಾರೆ? ಕಾರ್ಪೋರೇಟರ್‌ ಆದ ನನಗೇ ಹೀಗಾದ್ರೆ ಇನ್ನು ಸಾಮಾನ್ಯ ಜನರ ಕಥೆ ಏನು? ಈ ರೀತಿ ಹೇಳಿಕೆಗಳಿಂದ ತನಿಖೆ ದಿಕ್ಕು ತಪ್ಪುತ್ತದೆ. ಇದು ವೈಯಕ್ತಿಕ ಕಾರಣದಿಂದ ಆದ ಕೊಲೆ ಅಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!