ನೇಹಾ ಕೊಲೆ ಆರೋಪಿಗೆ ತಕ್ಕ ಶಿಕ್ಷೆಯಾಗಲಿ‌: ಸಚಿವ ಆರ್.ಬಿ.ತಿಮ್ಮಾಪುರ‌

ದಿಗಂತ ವರದಿ ಬಾಗಲಕೋಟೆ:

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆ ಪ್ರಕರಣದ‌ ತನಿಖೆ ನಡೆಯುತ್ತಿದೆ‌.‌ಆರೋಪಿಗೆ ತಕ್ಕ ಶಿಕ್ಷಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ‌ ಹೇಳಿದರು.

ನವನಗರದ ಪತ್ರಿಕಾಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ‌ ಅವರು, ಕಾನೂನಿನ ಪ್ರಕಾರ ಎಲ್ಲ ಆಯಾಮದಲ್ಲಿ ನೇಹಾ ಕೊಲೆ ಪ್ರಕರಣ ತನಿಖೆ ನಡೆಯುತ್ತಿದೆ. ತಪ್ಪು ಯಾರೇ ಮಾಡಲಿ ಅವರಿಗೆ ತಕ್ಕ ಶಿಕ್ಷೆಯಾಗಲಿ ಎಂದರು.

ಚುನಾವಣೆಯಲ್ಲಿ ಗೆಲ್ಲಲು ಲವ್ ಜಿಹಾದ್., ಕೋಮು‌ಭಾವನೆ ಸೃಷ್ಟಿ ಮಾಡುವುದನ್ನು ಬಿಜೆಪಿಯವರು ಮಾಡುತ್ತಾರೆ.‌‌ಚುನಾವಣೆ ಬಂದಾಗ ಇಂತಹ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.

ಚುನಾವಣೆ ಬಂದಾಗ ಬಿಜೆಪಿಯಬರ ನಡವಳಿಕೆ ಬದಲಾಗುತ್ತದೆ.‌ ಮುಖ್ಯಮಂತ್ರಿ ಬದಲಾಗುತ್ತಾರೆ.‌ಇವರ ಗೆದ್ದರೆ ಸಿಎಂ‌ ಖುರ್ಚಿಯಿಂದ ಕೆಳಗೆ ಇಳಿಸಿ ಬಿಡುತ್ತಾರೆ ಎಂಬ ಗುಲ್ಲು ಹಬ್ಬಿಸುವುದನ್ನು ಯತ್ನಾಳ ಬಿಡಬೇಕು.‌ನಮ್ಮ ಬಗ್ಗೆ ಮಾತನಾಡುವ ಯತ್ನಾಳ ತಮ್ಮ ಗುಂಪು ಯಾವುದು ಎಂದು ಸ್ಪಷ್ಟಪಡಿಸಬೇಕು ಎಂದು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿಯವರು ಸಣ್ಣತನ ಮಾತಗಳನ್ನು ಆಡುವುದನ್ನು ಬಿಡಬೇಕು. ದೇಶದ ಜನರಿಗೆ ಉದ್ಯೋಗ ನೀಡಲಿಲ್ಲ, ದೇಶದ ರಕ್ಷಣೆಯಲ್ಲಿ ಆಎಖಿ ತ ಸಂಪೂರ್ಣ ವಿಫಲವಾಗಿದೆ. ದೇಶದ, ರಾಜ್ಯದಲ್ಲಿ ಏನು ಗಲಾಟೆ ಆದರೂ ಕಾಂಗ್ರೆಸ್ ಗೆ ತಂದು ಹಚ್ಚುವುದನ್ನು ಬಿಡಬೇಕು ಎಂದು ಹೇಳಿದರು

ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆ‌ ಜನರಿಗೆ ತಲುಪಿದೆ. ಗ್ಯಾರಂಟಿ ಬಗ್ಗೆ ಟೀಕೆ ಮಾಡುವ ಬಿಜೆಪಿ ಅವರು ಈಗ ಗ್ಯಾರಂಟಿ ಗೆ ಬಂದು ನಿಂತಿದ್ದಾರೆ ಎಂದರು
ಅತ್ಯಾಚಾರ ಮಾಡಿದವನಿಗೆ ಒಂದು ವಾರದಲ್ಲಿ ಶಿಕ್ಷೆ ಆಗಬೇಕು.‌ ಅಂತಹ ಕಾನೂನು ತರದೇ ಇದ್ದರೆ ಅಪರಾಧ ಪ್ರಕರಣ ಹೆಚ್ಚಾಗುತ್ತದೆ.‌ನೇಹಾ ಕೊಲೆ ಕ್ಯಾಮರಾದಲ್ಲಿ‌ಸೆರೆಯಾಗಿದೆ. ಇಂತಹ ಆರೋಪಿಗಳಿಗೆ ಮರಣ ದಂಡನೆ‌ಆಗಬೇಕು.‌ಆರೋಪಿಗೆ ಉಗ್ರ ಶಿಕ್ಷೆ ಆಗಬೇಕು ಎಂದು ಕಾನೂನು ಸಚಿವ ಹಾಗೂ ಗೃಹ ಸಚಿವರನ್ನು ಆಗ್ರಹಿಸಿದರು.

ಬೀಳಗಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ದೇಶದಲ್ಲಿ ಜನರ ಮನಸ್ಸು ಹೊಡೆಯುವ‌‌ ಕೆಲಸ ಬಿಜೆಪಿ ಯಿಂದ ನಡೆಯುತ್ತಿದೆ.‌ ಚುನಾವಣೆಯಲ್ಲಿ ಗೆಲ್ಲಲು ಜನರ ಮನಸ್ಸು ಹೊಡೆಯುವುದು ಬೇಡ. ದೇಶದಲ್ಲಿ ಮಾಡಿದ ಸಾಧನೆ ಬಗ್ಗೆ ಮತ ಕೇಳಬೇಕು ಎಂದರು.

ನೇಹಾ ಪ್ರೀತಿ‌ ವಿಷಯ ಕುರಿತು ಅವರ ತಂದೆ ತಾಯಿಗೆ ಗೊತ್ತಿದ್ದರೂ ಅವರು ಮುಂಚೆ ಪೊಲೀಸ್ ಕಂಪ್ಲೆಟ್ ಕೊಟ್ಟಿದ್ದರೆ ಸಾವು ತಡೆಯಬಹುದಿತ್ತು.‌ಆದರೆ ನೇಹಾ ಕೊಂದಿರುವ ಆರೋಪಿಯನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!