ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಸಂಚಲನ ಮೂಡಿಸಿರುವ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಾಯಿ ಫಯಾಜ್ ಮಾತನಾಡಿದ್ದಾರೆ.
ನನ್ನ ಮಗ ಓದಿನಲ್ಲಿ ತುಂಬಾ ಜಾಣನಾಗಿದ್ದ. ಆದರೆ ಅವನು ಈ ರೀತಿ ಮಾಡಿರೋದು ನನಗೂ ನಂಬೋಕಾಗ್ತಿಲ್ಲ. ಅವನ ಪರವಾಗಿ ಇಡೀ ರಾಜ್ಯದ ಕ್ಷಮೆ ಕೇಳುತ್ತೇನೆ ಎಂದು ಮುಮ್ತಾಜ್ ಹೇಳಿದ್ದಾರೆ.
ನೇಹಾ ಫಯಾಜ್‌ನನ್ನು ಇಷ್ಟಪಡುತ್ತಿದ್ದಳು. ಅವಳೇ ಪ್ರಪೋಸ್ ಮಾಡಿದ್ದಳು. ಆಕೆ ಒಳ್ಳೆ ಹುಡುಗಿ. ಫಯಾಜ್ ಬಂದು ನೇಹಾ ಬಗ್ಗೆ ಹೇಳಿದಾಗ ನಾನು ಈ ಏಜ್‌ನಲ್ಲಿ ಲವ್ ಬೇಡ ಎಂದು ಹೇಳಿದ್ದೆ. ಅವನು ನನ್ನ ಮಾತು ಕೇಳಲಿಲ್ಲ. ಅವನು ಕೆಎಎಸ್ ಆಫೀಸರ್ ಆಗಬೇಕು, ಆಕ್ಟರ್ ಆಗಬೇಕು ಎಂದು ಕನಸು ಕಂಡಿದ್ದೆ. ಆದರೆ ಮಗ ಈ ಕೊಲೆಗಾರ ಆಗಿದ್ದು ಹೊಟ್ಟೆ ಉರಿಯುತ್ತಿದೆ ಎಂದಿದ್ದಾರೆ.
ನಾನು ನೂರಾರು ಮಕ್ಕಳಿಗೆ ಶಿಕ್ಷಣ ನೀಡುತ್ತೇನೆ, ನನ್ನ ಮಗನೇ ಹೀಗಾದ ಎಂದು ಕಣ್ಣೀರಿಟ್ಟಿದ್ದಾರೆ.