ಹೊಸ ದಿಗಂತ ವರದಿ,ಬನವಾಸಿ :
ಶಾಸಕ ಶಿವರಾಮ ಹೆಬ್ಬಾರ್ ಅವರು ವರದಾ ನದಿಯ ನೆರೆಯಿಂದ ಹಾನಿಗೊಳಗಾದ ಬಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗವಳ್ಳಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು.
ನೆರೆಯಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆಯನ್ನು ನಡೆಸಿ, ಯಾವುದೇ ಅಹಿತಕರ ಘಟನೆಗಳು ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲುವಂತೆ ಅಧಿಕಾರಿಗೆ ಸೂಚಿಸಿ, ಸಾರ್ವಜನಿಕ ಅಹವಾಲನ್ನು ಸ್ವೀಕರಿಸಿದರು.
ನೆರೆ ಹಾನಿಯ ಸಮರ್ಪಕ ಸರ್ವೆ ನಡೆಸುವಂತೆಯೂ ಅವರು ಸೂಚನೆ ನೀಡಿದರು.