ಕುಣಿಯಲಾರದವರಿಗೆ ನೆಲ ಡೊಂಕು, ಮೊಯ್ಲಿ, ಡಿಕೆ ಸುರೇಶ್ ಕ್ಷಮೆ ಕೇಳ್ಬೇಕು: ಪಿ. ರಾಜೀವ್

ಹೊಸದಿಗಂತ ವರದಿ ಬೆಂಗಳೂರು:

ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರ ದೇಶವಿರೋಧಿ ಹೇಳಿಕೆಯನ್ನು ಖಂಡಿಸುವುದಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಡಿ.ಕೆ.ಸುರೇಶ್ ಅವರು ತಮ್ಮ ಹೇಳಿಕೆ ಸಂಬಂಧ ದೇಶದ ಮುಂದೆ ಕ್ಷಮೆ ಕೇಳಬೇಕು. ವೀರಪ್ಪ ಮೊಯಿಲಿ ಅವರು ಪ್ರಧಾನಿಯವರನ್ನು ಜಾತಿಗೆ ಜೋಡಿಸಿ (ಟ್ಯಾಗ್ ಮಾಡಿ) ಮಾತನಾಡಿದ್ದಕ್ಕೆ ಈ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್‍ನವರು ಕುಣಿಯಲಾಗದವನಿಗೆ ನೆಲ ಡೊಂಕು ಎಂಬಂತೆ ಇದ್ದಾರೆ. 65 ವರ್ಷ ಇವರಿಗೆ ಕುಣಿಯಲು ಆಗಲೇ ಇಲ್ಲ ಎಂದು ಟೀಕಿಸಿದರು.

ಕಾಂಗೆಸ್ಸಿನ ವೀರಪ್ಪ ಮೊಯಿಲಿಯವರು, ನರೇಂದ್ರ ಮೋದಿಯವರು ಬ್ರಾಹ್ಮಣರಲ್ಲ; ಅವರನ್ನು ಅಯೋಧ್ಯೆಯ ರಾಮಲಲಾ ಪ್ರಾಣ ಪ್ರತಿಷ್ಠಾಪನೆಗೆ ಹೇಗೆ ಒಳಗೆ ಬಿಟ್ಟಿದ್ದೀರಿ ಎಂದು ಕೇಳಿದ್ದಾರೆ. ಇದು ಸಂವಿಧಾನವಿರೋಧಿ ಅಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಕಾಂಗ್ರೆಸ್ಸಿಗರು 65 ವರ್ಷ ಈ ದೇಶದಲ್ಲಿ ಬಡತನವನ್ನು ಜೀವಂತವಾಗಿ ಇಟ್ಟರು. 10 ವರ್ಷಗಳಲ್ಲಿ ಆಗುತ್ತಿರುವ ಪ್ರಗತಿಯನ್ನು ನೋಡಿ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು. 65 ವರ್ಷಗಳ ತಮ್ಮ ವೈಫಲ್ಯಕ್ಕೆ ಕಾಂಗ್ರೆಸ್ಸಿನವರು ಪಶ್ಚಾತ್ತಾಪ ಪಡಬೇಕಿತ್ತು. ಅದರ ಬದಲಾಗಿ ನೆಲ ಡೊಂಕು ಎಂದು ಪಲಾಯನವಾದ ಮಾಡುತ್ತಿದ್ದಾರೆ ಎಂದು ದೂರಿದರು.

ಇವುಗಳನ್ನು ಸಂಸತ್ತಿನ ಖಾಸಗಿ ಸಮಿತಿಗೆ ಕೊಟ್ಟಿರುತ್ತಾರೆ; ಇದಲ್ಲದೆ, ಇವರಿಬ್ಬರ ವಿರುದ್ಧ ಕೇಸು ದಾಖಲಿಸಿ ಇವರ ಸಂವಿಧಾನವಿರೋಧಿ ಧೋರಣೆಗೆ ಯಾವ ರೀತಿ ಕಾನೂನಾತ್ಮಕವಾಗಿ ಬುದ್ಧಿ ಕಲಿಸಬೇಕೆಂದು ಬಹಳಷ್ಟು ಜನರು ಯೋಚನೆ ಮಾಡುತ್ತಿದ್ದಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಡಿ.ಕೆ.ಸುರೇಶ್ ಅವರು ಪ್ರಮಾಣವಚನ ಸ್ವೀಕಾರ ಮಾಡಿ ಸಂಸತ್ತಿನ ಸದಸ್ಯರಾಗಿದ್ದಾರೆ. ರಾಷ್ಟ್ರದ ಐಕ್ಯತೆ ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುವುದಾಗಿ ಹಾಗೂ ರಕ್ಷಣೆ ಮಾಡುವುದಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದರಲ್ಲದೆ, ಕಾಂಗ್ರೆಸ್ಸಿನವರು ತಮ್ಮ ಸ್ಥಿಮಿತವನ್ನು ಕಳಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!