August 30, 2026
Sunday, August 30, 2026
spot_img

ನೇಪಾಳ ಜಲಪ್ರಳಯ: ಪರಿಹಾರ ಸಾಮಗ್ರಿ ಹೊತ್ತು ಕಠ್ಮಂಡು ತಲುಪಿದ ಭಾರತದ ನಾಲ್ಕನೇ ವಿಮಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭೀಕರ ಪ್ರವಾಹ ಹಾಗೂ ಭೂಕುಸಿತದಿಂದ ತತ್ತರಿಸಿರುವ ನೇಪಾಳಕ್ಕೆ ಭಾರತ ಸಹಾಯ ಹಸ್ತ ಚಾಚಿದ್ದು, ಭಾನುವಾರ ತನ್ನ ನಾಲ್ಕನೇ ವಿಮಾನವನ್ನು ಕಠ್ಮಂಡುವಿಗೆ ಕಳುಹಿಸಿಕೊಟ್ಟಿದೆ.

ರಕ್ಷಣಾ ಕಾರ್ಯಾಚರಣೆಯನ್ನು ಬೆಂಬಲಿಸುವ ತಂಡದೊಂದಿಗೆ 11 ಟನ್ ಅಗತ್ಯ ಸಾಮಗ್ರಿಗಳನ್ನು ಹೊತ್ತ ವಿಮಾನ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ.

ಭಾರತ ಏನೆಲ್ಲಾ ಕಳುಹಿಸಿ ಕೊಟ್ಟಿದೆ

ಆಹಾರ ಪ್ಯಾಕೆಟ್, ಸ್ಲೀಪಿಂಗ್ ಬ್ಯಾಗ್, ವೈದ್ಯಕೀಯ ಉಪಕರಣಗಳ ಜೊತೆಗೆ ಸುರಂಗಶೋಧ ಮತ್ತು ರಕ್ಷಣಾ ಕಾರ್ಯಚರಣೆಗಳಿಗಾಗಿ ವಿಶೇಷವಾಗಿ ಸಜ್ಜುಗೊಂಡ ತಾಂತ್ರಿಕ ತಂಡವನ್ನು ಹಾಗೂ DNA ವಿಶ್ಲೇಷಣೆಗಾಗಿ ವಿಶೇಷ ಪರಿಕರಗಳನ್ನು ಹೊಂದಿರುವ ವಿಧಿವಿಜ್ಞಾನ ತಜ್ಞರ ತಂಡವನ್ನು ಭಾರತ ನೇಪಾಳಕ್ಕೆ ಕಳುಹಿಸಿದೆ.

ಇಲ್ಲಿಯವರೆಗೆ ಭಾರತವು ಸುಮಾರು 68.5 ಟನ್ ಪರಿಹಾರ ಸಾಮಗ್ರಿಗಳನ್ನ ಕಠ್ಮಂಡುವಿಗೆ ರವಾನಿಸಿದ್ದು ಇವುಗಳಲ್ಲಿ ಔಷಧಗಳು, ಆಹಾರ ಪ್ಯಾಕೆಟ್ಗಳು ಸೇರಿದಂತೆ ಹಲವು ತಾಂತ್ರಿಕ ಉಪಕರಣಗಳು ಒಳಗೊಂಡಿವೆ.

ವಿದೇಶ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ ಪ್ರವಾಹ ಪೀಡಿತ ಪ್ರದೇಶಗಳಿಂದ ಸುಮಾರು 88 ಭಾರತೀಯ ಪ್ರಜೆಗಳನ್ನು ರಕ್ಷಿಸಲಾಗಿದ್ದು, ಪ್ರಸ್ತುತ 120 ಭಾರತೀಯ ಪ್ರಜೆಗಳು ಚೀನಾದಿಂದ ನೇಪಾಳಕ್ಕೆ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !