Monday, November 28, 2022

Latest Posts

ನೇಪಾಳ ಚುನಾವಣೆ: ಪ್ರಧಾನಿ ಶೇರ್ ದೇವುಬಾಗೆ ಭರ್ಜರಿ ಗೆಲುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನೇಪಾಳ ಚುನಾವಣೆಯಲ್ಲಿ ಹಾಲಿ ಪ್ರಧಾನ ಮಂತ್ರಿ ಶೇರ್ ಬಹದ್ದೂರ್ ದೇವುಬಾ ಅವರು ಪಶ್ಚಿಮ ನೇಪಾಳದ ದಾಡೆಲ್ಧುರಾ ಕ್ಷೇತ್ರದಿಂದ ಸತತ ಏಳನೇ ಬಾರಿಗೆ ಭಾರಿ ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ.
77 ವರ್ಷದ ದೇವುಬಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ, ಸ್ವತಂತ್ರ್ಯ ಅಭ್ಯರ್ಥಿ ಸಾಗರ್ ಧಕಲ್ (31) ಅವರ ವಿರುದ್ಧ 25,534 ಮತಗಳನ್ನು ಗಳಿಸಿದರು. ಸಾಗರ್ 1,302 ಮತಗಳನ್ನು ಪಡೆದರು. ದೇವುಬಾ ಅವರು ತಮ್ಮ ಐದು ದಶಕಗಳ ರಾಜಕೀಯ ಜೀವನದಲ್ಲಿ ಯಾವುದೇ ಸಂಸತ್ ಚುನಾವಣೆಯಲ್ಲಿ ಸೋತಿಲ್ಲ.
ದೇವುಬಾ ಪ್ರತಿಸ್ಪರ್ಧಿ ಸಾಗರ್ ಢಕಲ್ ಒಬ್ಬ ಯುವ ಇಂಜಿನಿಯರ್ ಆಗಿದ್ದು, ಐದು ವರ್ಷಗಳ ಹಿಂದೆ ಬಿಬಿಸಿಯ ಸಜ್ಹಾ ಸವಾಲ್ ಕಾರ್ಯಕ್ರಮದ ಸಾರ್ವಜನಿಕ ಚರ್ಚೆಯ ಸಂದರ್ಭದಲ್ಲಿ ದೇವುಬಾ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಈ ವೇಳೆ ಅವರು ದೇವುಬಾ ಅವರಂತಹ ಹಿರಿಯರರು ಕಣದಿಂದ ಹಿಂದೆ ಸರಿದು ರಾಜಕೀಯದಲ್ಲಿ ಯುವಕರಿಗೆ ಅವಕಾಶ ಮಾಡಿಕೊಡಬೇಕೆಂದು ಪ್ರತಿಪಾದಿಸಿದ್ದರು.
ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ದೇವುಬಾ ಅವರು ಪ್ರಸ್ತುತ ಐದನೇ ಅವಧಿಗೆ ಪ್ರಧಾನಿ ಹುದ್ದೆಯಲ್ಲಿದ್ದಾರೆ. ಆಡಳಿತಾರೂಢ ನೇಪಾಳಿ ಕಾಂಗ್ರೆಸ್ ಇದುವರೆಗೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ 10 ಸ್ಥಾನಗಳನ್ನು ಗೆದ್ದಿದೆ ಮತ್ತು ಅದು 46 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!