ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳ ರಾಷ್ಟ್ರಪತಿ ರಾಮ ಚಂದ್ರ ಪೌದೆಲ್‌ಗೆ ಹೃದಯಾಘಾತವಾಗಿದೆ. ನೇಪಾಳದ ಶಹೀದ್ ಗಂಗಾಲಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆ್ಯಂಜಿಯೋಪ್ಲಾಸ್ಟಿ ಸರ್ಜರಿ ಮಾಡಲಾಗಿದೆ.
78 ವರ್ಷದ ಪೌದೆಲ್ ಅವರು ಇಂದು ಬೆಳಗ್ಗೆ ಪೌದೆಲ್ ತೀವ್ರ ಎದೆನೋವಿನಿಂದ ಬಳಲಿದ್ದಾರೆ. ಹೀಗಾಗಿ ತಕ್ಷಣವೇ ಪೌದೆಲ್ ಅವರನ್ನು ಆಸ್ಪತ್ರೆ ದಾಖಲಿಸಲಾಗಿತ್ತು.
ತಪಾಸಣೆ ನಡೆಸಿದ ವೈದ್ಯರು ಹೃದಯಾಘಾತವಾಗಿರುವುದನ್ನು ದೃಢಪಡಿಸಿದ್ದಾರೆ. ಹೀಗಾಗಿ ಕುರ್ತು ನಿಘಾತ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ.
ಇದೀಗ ಮಂದಿನ 2 ದಿನಗಳ ಕಾಲ ಪೌದೆಲ್ ಅವರನ್ನು ಅಬರ್ಸವೇಶನ್‌ನಲ್ಲಿ ಇಡಲಾಗಿದೆ. ಸದ್ಯ ರಾಮ ಚಂದ್ರ ಪೌದೆಲ್ ಆರೋಗ್ಯ ಸ್ಥಿರವಾಗಿದೆ. ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳ ಬಳಿಕ ಪೌದೆಲ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಮಾರ್ಚ್ ತಿಂಗಳಲ್ಲಿ ರಾಮ ಚಂದ್ರ ಪೌದೆಲ್ ನೇಪಾಳ ನೂತನ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಬಳಿಕ ಎಪ್ರಿಲ್ 19 ರಂದು ರಾಮ ಚಂದ್ರ ಪೌದೆಲ್ ದೆಹಲಿಗೆ ಆಮಿಸಿದ 10ಕ್ಕೂ ಹೆಚ್ಚು ದಿನ ಚಿಕಿತ್ಸೆ ಪಡೆದಿದ್ದರು. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಎಪ್ರಿಲ್ 30 ರಂದು ನೇಪಾಳಕ್ಕೆ ಮರಳಿದ್ದರು.