‘ಚಿಂಗ್ಸ್‌ ಸಿಕ್ರೆಟ್‌ʼ ಸ್ವಾಧೀನಪಡಿಸಿಕೊಳ್ಳಲು ಯೋಚಿಸುತ್ತಿದೆ ʼನೆಸ್ಲೆʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ವಿಶ್ವದ ಅತಿದೊಡ್ಡ ಆಹಾರ ಸಮೂಹವಾದ ನೆಸ್ಲೆ ಎಸ್‌ಎ, ಭಾರತದ ಕ್ಯಾಪಿಟಲ್ ಫುಡ್ಸ್ ಪ್ರೈವೇಟ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಯೋಚಿಸುತ್ತಿದೆ. ಪ್ರಸ್ತುತ ಭಾರತವು ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮುತ್ತಿರುವುದರಿಂದ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸಲು ನೆಸ್ಲೆ ಗಮನ ಹರಿಸುತ್ತಿದ್ದು ಅದರ ಭಾಗವಾಗಿ ಈ ಖರೀದಿಗೆ ನೆಸ್ಲೆ ಮುಂದಾಗಿದೆ.

ಪ್ರಸ್ತುತ ಸ್ವಿಸ್‌ ಮೂಲದ ನೆಸ್ಲೆ ಕಂಪನಿ ಮುಂಬೈ ಮೂಲದ ಕ್ಯಾಪಿಟಲ್ ಫುಡ್ಸ್‌ ನೊಂದಿಗೆ ಸಂಭಾವ್ಯ ಒಪ್ಪಂದದ ನಿಯಮಗಳನ್ನು ಚರ್ಚಿಸುತ್ತಿದೆ ಎಂದು ಮೂಲಗಳ ವರದಿ ಉಲ್ಲೇಖಿಸಿದ್ದು ಬಿಲಿಯನ್‌ ಡಾಲರ್‌ ಗೂ ಅಧಿಕ ಖರೀದಿ ಮೊತ್ತವನ್ನು ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ. ಕ್ಯಾಪಿಟಲ್ ಫುಡ್ಸ್ ಚಿಂಗ್ಸ್ ಸೀಕ್ರೆಟ್ ಬ್ರಾಂಡ್‌ ಮಸಾಲೆಯುಕ್ತ ನೂಡಲ್ಸ್ ಮತ್ತು ಫ್ಯೂಷನ್ ಚಟ್ನಿಗಳನ್ನು ಹಾಗು ಸ್ಮಿತ್ ಮತ್ತು ಜೋನ್ಸ್ ಅಡುಗೆ ಪೇಸ್ಟ್‌ಗಳು ಮತ್ತು ಮಸಾಲಾ ಮಿಶ್ರಣಗಳನ್ನು ಸಹ ಮಾರಾಟ ಮಾಡುತ್ತದೆ.

ಸಂಭಾವ್ಯ ಒಪ್ಪಂದದ ಕುರಿತು ಮಾತುಕತೆ ಮುಂದುವರಿದಿದೆ ಎನ್ನಲಾಗಿದ್ದು ಕ್ಯಾಪಿಟಲ್‌ ಫುಡ್ಸ್‌ ಖರೀದಿಗೆ ಹಲವಾರು ಇತರೆ ಕೆಂಪನಿಗಳೂ ಕೂಡ ಆಸಕ್ತಿ ವಹಿಸುತ್ತಿದ್ದು ಅಂತಿಮವಾಗಿ ನೆಸ್ಲೆ ವಿಜೇತನಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.

ಕಳೆದ 12 ತಿಂಗಳುಗಳಲ್ಲಿ ಮುಂಬೈ ವಹಿವಾಟಿನಲ್ಲಿ ನೆಸ್ಲೆಯ ಪಟ್ಟಿ ಮಾಡಲಾದ ಭಾರತೀಯ ಘಟಕದ ಷೇರುಗಳು 10% ಗಳಿಸಿವೆ, ಇದು ಸುಮಾರು 22.3 ಬಿಲಿಯನ್ ಡಾಲರ್‌ ಮಾರುಕಟ್ಟೆ ಮೌಲ್ಯ ಸಂಗ್ರಹಕ್ಕೆ ಕಾರಣವಾಗಿದೆ. ಸಂಸ್ಥೆಯು 1961 ರಲ್ಲಿ ಭಾರತದಲ್ಲಿ ತನ್ನ ಮೊದಲ ಉತ್ಪಾದನಾ ಸೌಲಭ್ಯವನ್ನು ಪ್ರಾರಂಭಿಸಿತು ಮತ್ತು ದೇಶದಲ್ಲಿ ಮೊಸರು ನಿಂದ ಧಾನ್ಯಗಳವರೆಗೆ ಎಲ್ಲವನ್ನೂ ಮಾರಾಟ ಮಾಡುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!