ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಯಾವುದೇ ಬ್ರಾಂಡ್ ವಸ್ತುವಾಗಿರಲಿ ಅದರ ಪ್ರಚಾರಕ್ಕೆ ಮಾಡೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಕಾಮನ್. ಈ ಒಂದು ಜಾಹೀರಾತಿನಲ್ಲೂ ಕೂಡ ಎಲ್ಲಾ ಮಾಡೆಲ್‌ಗಳು ದುಬಾರಿ ಹೊಸ ಸೀರೆಗಳನ್ನು ಧರಿಸಿ, ವಾಕ್ ಮಾಡಿದ್ದಾರೆ. ಆದರೆ ಮಾಡೆಲ್‌ಗಳ ಮುಖಭಾವ ಕಂಡ ನೆಟ್ಟಿಗರು ಬೆಚ್ಚಿಬಿದ್ದಿರುವುದಾಗಿ ಕಮೆಂಟ್ ಮಾಡುತ್ತಿದ್ದಾರೆ. ಅವರ ಮುಖದಲ್ಲಿ ನಗು ಇಲ್ಲದೆ ದುಃಖ, ಸಪ್ಪೆಮೋರೆ ಮಾಡೆಲ್‌ಗಳನ್ನು ಚಿತ್ರಿಸಿದ್ದಕ್ಕಾಗಿ ಜಾಹೀರಾತು ಟೀಕೆಗೆ ಗುರಿಯಾಗಿದೆ.
ಹಬ್ಬದ ಮತ್ತು ಮದುವೆಯ ಸೀಸನ್‌ಗೆ ಮುಂಚಿತವಾಗಿ, ಡಿಸೈನರ್ ಬ್ರ್ಯಾಂಡ್ ‘ಸಬ್ಯಸಾಚಿ’ ತನ್ನ ಹೆರಿಟೇಜ್ ಬ್ರೈಡಲ್ ಸೀರೆಗಳಿಗಾಗಿ ಹೊಸ ಜಾಹೀರಾತನ್ನು ಬಿಡುಗಡೆ ಮಾಡಿದೆ. ಈ ಜಾಹೀರಾತು ಈಗ ವೈರಲ್ ಆಗುತ್ತಿದೆ. ಈ ಜಾಹೀರಾತಿನಲ್ಲಿ ಎಲ್ಲಾ ಮಾಡೆಲ್‌ಗಳು ಹೊಸ ವಿನ್ಯಾಸದ ಸೀರೆಗಳನ್ನು ಧರಿಸಿದ್ದಾರೆ. ಆದರೆ ಅವರ ಮುಖದಲ್ಲಿ ಸಂತೋಷ ಕಾಣುತ್ತಿಲ್ಲ. ಬದಲಿಗೆ ದುಃಖ ಮತ್ತು ಕಿರಿಕಿರಿಯಿಂದ ಇರುವಂತೆ ತೋರುತ್ತದೆ ಹೀಗಾದರೆ ಸೀರೆ ಮಾರಾಟ ಆಗುತ್ತಾ ಎಂದು ಪ್ರಶ್ನಿಸಿದರು.
ಕೆಲವು ಗ್ರಾಹಕರು ಬ್ರ್ಯಾಂಡ್ ಅನ್ನು ಅಪಹಾಸ್ಯ ಮಾಡಿದರು. ಸೀರೆ ವಿನ್ಯಾಸಗಳ ಬಗ್ಗೆ ಕಾಮೆಂಟ್ ಮಾಡಿದ್ದಾರೆ, ಇವು ಅಂತ್ಯಕ್ರಿಯೆಗೆ ಧರಿಸುವ ರೀತಿ ಇವೆ ಎಂದಿದ್ದಾರೆ. ಮಾಡೆಲ್‌ಗಳ್ಯಾಕೆ ದುಃಖಿತರಾಗಿದ್ದಾರೆ? ಖಿನ್ನತೆ ಒಳಗಾಗಿದ್ದಾರಾ? ಸೀರೆ ಉಟ್ಟಿದ್ದಾರೆ ಹಣೆಗೆ ಬಿಂದಿ ಎಲ್ಲಿ ? ಈ ರೀತಿಯ ಪ್ರಶ್ನೆಗಳು ಬಂದಿವೆ. ಈ ಬಗ್ಗೆ ಬ್ರ್ಯಾಂಡ್ ಏನು ಉತ್ತರಿಸುತ್ತದೆ ನೋಡೋಣ.