ಹೊಸದಿಗಂತ ವರದಿ ಸುಂಟಿಕೊಪ್ಪ:
ಸೋಮವಾರ ತಡ ರಾತ್ರಿ ಸಂಭವಿಸಿದ ಬೈಕ್ ಅವಘಡದಲ್ಲಿ ಯುವಕರಿಬ್ಬರು ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಅಂದಗೋವೆ ಜಂಕ್ಷನ್ ಬಳಿ ನಡೆದಿದೆ.
ಮೃತರನ್ನು ಸುಂಟಿಕೊಪ್ಪ ಮಧುರಮ್ಮ ಬಡಾವಣೆಯ ನಿವಾಸಿಗಳಾದ ಉದಯ(21) ಹಾಗೂ ಚಂದನ್ (20)ಎಂದು ಗುರುತಿಸಲಾಗಿದೆ.
ಸೋಮವಾರ ತಡ ರಾತ್ರಿ ಕುಶಾಲನಗರದಿಂದ ಸುಂಟಿಕೊಪ್ಪಕ್ಕೆ ಆಗಮಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ರಸ್ತೆ ಬದಿಯ ಕಂಬಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಸವಾರ ಹಾಗೂ ಸಹ ಸವಾರ ಸಮೀಪದ ಪೊದೆಯೊಳಗೆ ಎಸೆಯಲ್ಪಟ್ಟು ಸಾವಿಗೀಡಾಗಿದ್ದಾರೆ. ರಾತ್ರಿ ಘಟನೆ ನಡೆದಿದ್ದರೂ, ಮಂಗಳವಾರ ಬೆಳಿಗ್ಗೆಯಷ್ಟೇ ಇದು ಗೋಚರಿಸಿದೆ. ವಿಷಯ ತಿಳಿದ ಸುಂಟಿಕೊಪ್ಪ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.