ರಾಮ ಮಂದಿರ ಹೆಸರಲ್ಲಿ ವಂಚಕರ ಜಾಲ ಪತ್ತೆ: ಕ್ಯೂಆರ್‌ ಕೋಡ್ ಸ್ಕ್ಯಾಮ್ ಬಗ್ಗೆ ಇರಲಿ ಎಚ್ಚರ!

ಹೊಸದಿಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ (Ram Temple) ಉದ್ಘಾಟನೆಗೆ ಭರದ ಸಿದ್ಧತೆ ನಡೆಯುತ್ತಿದ್ದು, ಇತ್ತ ಭಕ್ತಾದಿಗಳನ್ನು ವಂಚಿಸುವ ಸೈಬರ್ ಜಾಲವೊಂದು (Cyber Crime) ಸಕ್ರಿಯವಾಗಿದೆ.

ಮಂದಿರ ನಿರ್ಮಾಣಕ್ಕೆ ಕಾಣಿಕೆಯನ್ನು ಬೇಡುವ ಹೆಸರಲ್ಲಿ ವಂಚಕ ಕ್ಯೂಆರ್‌ ಕೋಡ್ ಸ್ಕ್ಯಾಮ್ (QR Code Scam) ಬಗ್ಗೆ ಭಕ್ತರು ಎಚ್ಚರಿಕೆ ವಹಿಸಬೇಕು ಎಂದು ವಿಶ್ವ ಹಿಂದೂ ಪರಿಷತ್(Vishwa Hindu Parishat- VHP) ವಕ್ತಾರ ವಿನೋದ್ ಬನ್ಸಾಲ್ ಅವರು ಹೇಳಿದ್ದಾರೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ (Shri Ram Janmabhoomi Teerth Kshetra) ಹೆಸರಿನಲ್ಲಿ ಫೇಕ್ ಐಡಿ ಸೃಷ್ಟಿಸಿ(Fake ID), ಭಕ್ತರಿಂದ ಕಾಣಿಕೆಯಾಗಿ (Ram Devotees) ಹಣವನ್ನು ಸುಲಿಗೆ ಮಾಡುತ್ತಿರುವ ಸೈಬರ್ ಜಾಲ ಸಕ್ರಿಯವಾಗಿದೆ .

ಈ ಕುರಿತು ಪೊಲೀಸರಿಗೆ ದೂರು ನೀಡಿರುವ ವಿಎಚ್‌ಪಿ ವಕ್ತಾರ ವಿನೋದ್ ಬನ್ಸಾಲ್ ಅವರು, ಅ ಅಯೋಧ್ಯಾ ದೇಗುಲ ಅಭಿವೃದ್ದಿ ಹೆಸರಿನಲ್ಲಿ ಭಕ್ತಾದಿಗಳಿಂದ ಹಣವನ್ನು ಸುಲಿಗೆ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಕ್ಯೂಆರ್‌ ಕೋಡ್ ಷೇರ್ ಮಾಡುವ ಮೂಲಕ ಹಣವನ್ನು ಸುಲಿಯುತ್ತಿದ್ದಾರೆ. ಈ ಕ್ಯೂಆರ್‌ ಕೋಡ್ ಸ್ಕ್ಯಾನಿಂಗ್ ಮಾಡಿದರೆ ಯುಪಿಐ ಬಳಕೆದಾರರನ್ನು ಮನೀಶಾ ನಲ್ಲಬೆಲ್ಲಿ ಎಂಬ ಹೆಸರಿನ ಯುಪಿಐ ಐಡಿಗೆ ನಿರ್ದೇಶಿಸುತ್ತದೆ ಎಂದು ಹೇಳಿದ್ದಾರೆ.

ಕೆಲವರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಹೆಸರಿನಲ್ಲಿ ನಕಲಿ ಐಡಿ ಮಾಡಿ ಹಣ ವಂಚಿಸಲು ಯತ್ನಿಸುತ್ತಿದ್ದಾರೆ. ಕೇಂದ್ರ ಗೃಹ ಸಚಿವಾಲಯ, ದಿಲ್ಲಿ ಪೊಲೀಸ್, ಡಿಜಿಪಿ ಮತ್ತು ಉತ್ತರ ಪ್ರದೇಶ ಪೊಲೀಸ್ ಅಂಥವರ ವಿರುದ್ಧ ವಿಳಂಬ ಮಾಡದೇ ಕ್ರಮ ಕೈಗೊಳ್ಳಬೇಕು. ಈ ಸಂದರ್ಭಕ್ಕಾಗಿ ಹಣವನ್ನು ಸಂಗ್ರಹಿಸಲು ಟ್ರಸ್ಟ್ ಯಾವುದೇ ಸಂಸ್ಥೆಗೆ ಅಧಿಕಾರ ನೀಡಿಲ್ಲ ಎಂದು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.

ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಸಮಾರಂಭದ ವಿಧಿವಿಧಾನಗಳು ಜನವರಿ 16 ರಂದು ಪ್ರಾರಂಭವಾಗುತ್ತವೆ ಮತ್ತು ಜನವರಿ 22 ರವರೆಗೆ ಏಳು ದಿನಗಳ ಕಾಲ ಮುಂದುವರಿಯುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭವ್ಯ ಮಂದಿರದ ವಿಗ್ರಹ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!